ಹಳೇಬೀಡು: ಅಂತರರಾಷ್ಟ್ರೀಯ ಸ್ನೇಹದ ನಿಲುವು – ಇಟಲಿ ಪ್ರವಾಸಿಗರಿಂದ ಕೆಪಿಎಸ್ ಮಕ್ಕಳಿಗೆ ಸಮವಸ್ತ್ರ ವಿತರಣೆ

The team, led by team leader Potio, entered the KPS school and spoke to the teachers and children of the school. They were delighted to see the children's excitement.

ಹಳೇಬೀಡು: ಇಟಲಿ ಪ್ರವಾಸಿಗರು ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ 60 ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.

ತಂಡದ ಪ್ರಮುಖರಾದ ಪೋತಿಯೋ ಅವರ ನಾಯಕತ್ವದಲ್ಲಿ ಆಗಮಿಸಿದ ತಂಡ ಕೆಪಿಎಸ್ ಶಾಲೆಯ ಒಳ ಪ್ರವೇಶಿಸಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳ ಜೊತೆ ಮಾತನಾಡಿದರು. ಮಕ್ಕಳ ಕಲರವ ನೋಡಿ ಸಂಭ್ರಮಿಸಿದರು.

ಭಾರತೀಯ ಶಿಕ್ಷಣ ‌ ಹಾಗೂ ವಿಭಿನ್ನ ಭಾಷೆ ಶಿಕ್ಷಣದ ಕುರಿತು ತಂಡ ಶಿಕ್ಷಕರಿಂದ ಮಾಹಿತಿ ಪಡೆಯಿತು. ಮಕ್ಕಳಲ್ಲಿ ಕಲಿಕೆಯ ಮನೋಭಾವ ಬೆಳೆಯಲಿ ಎಂದು ತಂಡದ ಪ್ರಮುಖ ಪೋತಿಯೋ ಹೇಳಿದರು.

ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಎಸ್ ಇ ಮಾತನಾಡಿ, ಇಟಲಿ ಪ್ರವಾಸಿಗರ ತಂಡ ನಮ್ಮ ಶಾಲೆಗೆ ಭೇಟಿ ನೀಡಿದ್ದು ಖುಷಿ ಆಯಿತು. ಮಕ್ಕಳಿಗೆ ಬಟ್ಟೆ ನೀಡಿ ಪ್ರೋತ್ಸಾಯಿಸಿದರು. ಕನ್ನಡ ಭಾಷೆಯಲ್ಲಿ ಮಕ್ಕಳಿಗೆ ವಿವರಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ನಾರಾಯಣ್ ಎಸ್ ಜೆ, ಶಿಕ್ಷಕರರಾದ ಶಂಕರೇಗೌಡ, ಶಮಂತ್ ಇದ್ದರು.