ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ನಗರ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಕಲೇಶಪುರ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸೈಯದ್ ಮುಫೀಜ್ ಬಿನ್ ಸೈಯದ್ ಅಮೀರ್ ಸಾಬ್ ಅವರನ್ನು ಸಕಲೇಶಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಪ್ರಾಧಿಕಾರದ ಸದಸ್ಯರಾಗಿ ಹೆಚ್.ಹೆಚ್. ಚೊಕ್ಕಣ್ಣಗೌಡ ಬಿನ್ ಹನುಮಂತೇಗೌಡ (ಹೊಸಕೊಪ್ಪಲು ಗ್ರಾಮ, ಬೆಳಗೋಡು ಹೋಬಳಿ), ದೇವರಾಜು ಬಿನ್ ವೆಂಕಟಯ್ಯ (ಬೈಕರೆ ಗ್ರಾಮ, ಕಸಬಾ ಹೋಬಳಿ) ಮತ್ತು ಬಿ.ಡಿ. ವಿಜಯ್ ಬಿನ್ ಬಿ.ಎ. ಧರ್ಮಪ್ಪ (ಬ್ಯಾಕರವಳ್ಳಿ ಗ್ರಾಮ, ಕಸಬಾ ಹೋಬಳಿ). ಇವರನ್ನು ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಸಯ್ಯದ್ ಮುಪೀಜ್, ನಗರ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಸಹಕರಿಸಿದ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ತಾಲೂಕ ಅಧ್ಯಕ್ಷ ಬೈರ್‌ಮುಡಿ ಚಂದ್ರು , ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧ್ಯಕ್ಷ ಲಕ್ಷ್ಮಣ್, ನಗರ ಅಭಿವೃದ್ಧಿ ಸಚಿವ ಬೈರತಿ ಬಸವರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಮುಖಂಡರಿಗೆ ವಂದನೇ ಸಲ್ಲಿಸಿದರು.
ಸಕಲೇಶಪುರ ಯೋಜನಾ ಬದ್ಧವಾಗಿ ಅಭಿವೃದ್ಧಿಗೊಳ್ಳಬೇಕು, ಇದಕ್ಕಾಗಿ ಸಾರ್ವಜನಿಕ ಅವರೊಂದಿಗೆ ಹಾಗೂ ಪಕ್ಷದ ಮುಖಂಡರೊಂದಿಗೆ ಕಾರ್ಯಕರ್ತರಿಗೆ ಚರ್ಚಿಸಿ ನನ್ನ ಕನಸಿನ ಸಕಲೇಶಪುರ ಅಭಿವೃದ್ಧಿ ನಿರ್ಮಾಣಕ್ಕೆ ಮುಂದಾಗುತ್ತೇನೆ ಎಂದರು.
The state government has issued an order appointing the chairman and members of the Sakleshpur Town Planning Authority in Hassan district.










