ನುಗ್ಗೇಹಳ್ಳಿ:ಜಂಬೂರು ಗ್ರಾಮದಲ್ಲಿ ಶ್ರೀ ಕೋಟೆ ಮಾರಮ್ಮ ಬ್ರಹ್ಮರಥೋತ್ಸವ ಸಂಭ್ರಮ

The Sri Kote Maramma Brahmarathotsava of Jambur village in Nuggehalli hobli was celebrated with great pomp and show on Monday night in the presence of thousands of devotees.

ನುಗ್ಗೇಹಳ್ಳಿ : ಹೋಬಳಿಯ ಜಂಬೂರು ಗ್ರಾಮದ ಶ್ರೀ ಕೋಟೆ ಮಾರಮ್ಮ ಬ್ರಹ್ಮರಥೋತ್ಸವ ಸೋಮವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಭಾನುವಾರ ಮತ್ತು ಸೋಮವಾರ ದೇವಾಲಯದಲ್ಲಿ ಶ್ರೀ ಕೋಟೆ ಮಾರಮ್ಮ ದೇವಿಗೆ ಬೆಳಗ್ಗೆಯಿಂದಲೇ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆದವು ಗ್ರಾಮದ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಉತ್ಸವದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ದೇವರ ಉತ್ಸವ ನೆರವೇರಿತು.

ಹೋಬಳಿ ಕೇಂದ್ರದ ಮಂಚೇನಹಳ್ಳಿ, ತೆಂಕನಹಳ್ಳಿ, ಹುಲಿಕೆರೆ, ಅತ್ತಿಹಳ್ಳಿ, ಹೊನ್ನಮರನಹಳ್ಳಿ, ಅವೇರಹಳ್ಳಿ, ಮುದ್ದನಹಳ್ಳಿ, ಒಂಟಿ ಮಾವಿನಹಳ್ಳಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು.

ಸಂಪ್ರದಾಯದಂತೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ರಥದ ಸುತ್ತ ದೇವರ ಪ್ರದಕ್ಷಿಣೆ ನಡೆಸಿ ನಂತರ ರಥದಲ್ಲಿ ಪ್ರತಿಷ್ಠಾಪಿಸಲಾಯಿತು ಭಕ್ತರು ಹಣ್ಣು ದವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು .

ರಥೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಚಂಡಿಕೆ ಮೇಳ ತಂಡದ ವತಿಯಿಂದ ವಿಶೇಷ ಚಂಡಿಕೆ ವಾದ್ಯ ನಡೆಸಿಕೊಟ್ಟರು ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಶನೇಶ್ವರ ಸ್ವಾಮಿ ಶ್ರೀ ಜಕೇಶ್ವರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು ಗ್ರಾಮವು ವಿದ್ಯುತ್ ದೀಪದ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಶಾಸಕ ಸಿಎನ್ ಬಾಲಕೃಷ್ಣ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ದಂಪತಿಗಳು ಮತ್ತು ಗ್ರಾಮದ ಪ್ರಮುಖರಾದ ನಾಗಭೂಷಣ್ ರವರು ರಥೋತ್ಸವದಲ್ಲಿ ಪಾಲ್ಗೊಂಡರು.

The Sri Kote Maramma Brahmarathotsava of Jambur village in Nuggehalli hobli was celebrated with great pomp and show on Monday night in the presence of thousands of devotees.