ಬೆಂಗಳೂರು : ಸಿಎಂ ಬದಲಾವಣೆ ವಿಚಾರ: ವೈಯಕ್ತಿಕ ಹೇಳಿಕೆಗಳಿಗೆ ಅವರೇ ಸ್ಪಷ್ಟನೆ ಕೊಡಬೇಕು- ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಫೆಬ್ರವರಿ,10,2026 :  ಸಿಎಂ ಬದಲಾವಣೆ ಬಗ್ಗೆ ಹಲವು ಶಾಸಕರು ವಿವಿಧ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ನಮ್ಮ ಹೈಕಮಾಂಡ್ ಬಗ್ಗೆ ನನಗೆ ತುಂಬಾ ಭಯ ಇದೆ. ಬೇರೆ ಶಾಸಕರಿಗೆ ಭಯ ಇಲ್ಲದೆ ಇರಬಹುದು. ವೈಯಕ್ತಿಕವಾಗಿ ಹೇಳಿದಾಗ ಅವರೇ ಆ ಬಗ್ಗೆ ಸ್ಪಷ್ಟನೆ ಕೊಡಬೇಕು. ಪಕ್ಷದ ಪರವಾಗಿ ಹೇಳಿಕೆ ಕೊಟ್ಟರೆ ಅದಕ್ಕೆ ನಾವೆಲ್ಲಾ ಬದ್ದ ಎಂದರು.

ವೈಯಕ್ತಿಕ ಆಸೆ ಆಕಾಂಕ್ಷೆಗಳ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕು. ನಮ್ಮ ಹೈಕಮಾಂಡ್ ನಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.