ಹಳೇಬೀಡು:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ಹಳೇಬೀಡಿನಲ್ಲಿ ಶನಿವಾರ ನಡೆಯಿತು.
ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಪಥ ಸಂಚಲನ ಆರಂಭವಾಯಿತು. ಆರ್.ಎಸ್.ಎಸ್ ಗಣವೇಷಧಾರಿಗಳು ಧ್ವಜ ವಂದನೆ ಸಲ್ಲಿಸಿದರು.

ನಮಸ್ತೆ ಸದಾ ವತ್ಸಲೆ ಮಾತೃ ಭೂಮಿ ಗೀತೆ ಹಾಡಿದ ನಂತರ ಪಥ ಸಂಚಲನ ಆರಂಭವಾಯಿತು. ಹೊಯ್ಸಳೇಶ್ವರ ದೇವಾಲಯ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ಸಾಗಿದ ಪಥ ಸಂಚಲನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಬಂದು ಸೇರಿತು.
ಪಥ ಸಂಚಲನದಲ್ಲಿ ಸಾಗಿದ ಭಾರತ ಮಾತೆ, ಹಾಗೂ ಆರ್.ಎಸ್.ಎಸ್ ಸಂಸ್ಥಾಪಕ ಕೇಶವ ಬಲಿರಾಂ ಹೆಡಗೆವಾರ್ ಚಿತ್ರ ಹೊತ್ತ ವಾಹನಕ್ಕೆ ಅಂಗಡಿ ಹಾಗೂ ಮನೆಗಳ ಮುಂದೆ ಪುಷ್ಪ ವೃಷ್ಟಿ ನೆರವೇರಿಸಿದರು. ಹೊಯ್ಸಳ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಜೆಸಿಬಿಯಿಂದ ಪುಷ್ಪ ವೃಷ್ಟಿ ನೆರವೇರಿಸಲಾಯಿತು.
ಶಾಸಕ ಎಚ್.ಕೆ.ಸುರೇಶ್ ಗಣವೇಷ ಧರಿಸಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಆರ್.ಎಸ್.ಎಸ್ ವಿಭಾಗ ಪ್ರಚಾರಕ ಮಂಜುನಾಥ, ಜಿಲ್ಲಾ ಸಂಘ ಕಾರ್ಯನಿರ್ವಾಹಕ ಶ್ರೀಧರ ನಾಗೇನಹಳ್ಳಿ, ತಾಲ್ಲೂಕು ಸಂಘ ಸಂಚಾಲಕ ಮುರುಳಿ.ಬಿ.ಎಸ್, ತಾಲ್ಲೂಕ್ ಕಾರ್ಯವಾಹಕ ಶ್ರೀನಿವಾಸ, ಪ್ರಮುಖರಾದ ರಂಜಿತ್, ಶ್ರೀಹರಿ, ಎಚ್.ಆರ್.ಚಂದ್ರಶೇಖರ್, ಎಚ್.ಎಲ್.ಮೋಹನ್, ನಿತ್ಯಾನಂದ ಭಾಗವಹಿಸಿದ್ದರು.
ದೇಶದೆಲ್ಲೆಡೆ ವ್ಯಾಪಕವಾಗಿ ಪ್ರಚಾರಕ್ಕೆ ಬರುತ್ತಿರುವುದರಿಂದ ಕಾಂಗ್ರೆಸ್ ಗೆ ಆರ್.ಎಸ್.ಎಸ್ ಭಯ ಕಾಡುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು ಸಹಿಸಲಾಗದೆ, ಕಾಂಗ್ರೇಸ್ಸಿಗರು ಆರ್.ಎಸ್.ಎಸ್ ಅವಹೇಳನ ಮಾಡುತ್ತಿದ್ದಾರೆ.
ಒಂದು ಸಮುದಾಯವನ್ನು ಓಲೈಕೆ ಮಾಡಲು ಕಾಂಗ್ರೆಸ್ ಆರ್.ಎಸ್.ಎಸ್ ಅನ್ನು ವಿರೋಧಸುತ್ತಿದೆ. ಆರ್.ಎಸ್.ಎಸ್ ರದ್ದು ಮಾಡಲು ಅದೇನೂ ಭಯೋತ್ಪಾದಕ ಸಂಘಟನೆಯಲ್ಲ. ಆರ್.ಎಸ್.ಎಸ್ ಎಂಬುದು ದೇಶಭಕ್ತಿಯ ಪ್ರತೀಕ ಎಂಬುದು ಅರ್ಥವಾಗದೆ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಎಚ್.ಕೆ.ಸುರೇಶ್ ಹೇಳಿದರು.










