ಶ್ರವಣಬೆಳಗೊಳದ ಸರ್ವಮಾನ್ಯ ಹೊಸಹಳ್ಳಿಯಲ್ಲಿ ಅದ್ದೂರಿ ಗಣೇಶೋತ್ಸವ ಹಾಗೂ ವಿಸರ್ಜನೆ

ಶ್ರವಣಬೆಳಗೊಳ: ಹೋಬಳಿಯ ಎಸ್.ಹೊಸಹಳ್ಳಿ ಗ್ರಾಮದ ಶ್ರೀ ಭಜರಂಗಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರಪಿಷ್ಠಾಸಲಾಗಿದ್ದ ಶ್ರೀ ಗಣಪತಿ ಮೂರ್ತಿಯ ಮೆರವಣಿಗೆ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.

ರಾತ್ರಿ ಪುಷ್ಪಾಲಂಕಾರ, ಗಣಪತಿ ಹೋಮ, ಮಹಾಮಂಗಳಾರತಿಯೊಂದಿಗೆ ಪೂಜಾ ಕೈಂಕರ್ಯಗಳು ಹಾಗೂ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ವಿಶೇಷವಾಗಿ ಅತ್ತಿಹಳ್ಳಿಯ ಅಮೃತಲಿಂಗೇಶ್ವರ ಮಹಿಳಾ ಕಲಾ ತಂಡದವರಿಂದ ಜಾನಪದ ಕೋಲಾಟ ಕಾರ್ಯಕ್ರಮ ಗಮನ ಸೆಳೆಯಿತು.

ಶ್ರೀ ವೀರಭದ್ರೇಶ್ವರ ಕಲಾ ತಂಡದವರಿಂದ ವೀರಗಾಸೆ ನೃತ್ಯ, ಮಂಗಳವಾದ್ಯ, ಕೆಂಕೆರೆ ಬ್ಯಾಂಡ್ ಸೆಟ್ ಸೇರಿದಂತೆ ವಿವಿಧ ಕಲಾ ತಂಡಗಳು ಹಾಗೂ ಹೊಸಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮದ ರೈತರು ಸಾಕಿರುವ ಹಳ್ಳಿಕಾರ್ ಎತ್ತುಗಳ ವಿಶೇಷ ಮೆರವಣಿಗೆಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಉತ್ಸವ ನೆರವೇರಿಸಿ ಹೊಸಹಳ್ಳಿಯ ದೊಡ್ಡಕೆರೆಯಲ್ಲಿ ವಿಸರ್ಜಿಸಲಾಯಿತು.