ಹಾಸನ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಕುಂಬಾರ ಸಮುದಾಯದವರು ಜಾತಿ ಕಾಲಂನಲ್ಲಿ ಕುಂಬಾರ (ಎ-೦೭೮೧) ಎಂದು ನಮೂದಿಸುವಂತೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ವಿ.ಕೃಷ್ಣಪ್ಪ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮತನಾಡಿ, ಸರ್ಕಾರ ಸೆ.೨೨ ರಿಂದ ಅ.೭ರವರೆಗೆ ಸಮೀಕ್ಷೆ ನಡೆಸುತ್ತಿದ್ದು, ಕುಂಬಾರ ಜನಾಂಗದಲ್ಲಿ ವಿವಿಧ ಪಂಗಡದವರಿದ್ದಾರೆ. ಈ ವೇಳೆ ಉಪಜಾತಿ ಕಾಲಂನಲ್ಲಿಯೂ ಕೇವಲ ಕುಂಬಾರ ಎಂದು ನಮೂದಿಸಿ ಹಾಗೂ ಕಲಂ ನಂ ೮ ರ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸುವಂತೆ ಮನವಿ ಮಾಡಿದರು.
ಇಡೀ ರಾಜ್ಯದಲ್ಲಿ ಕುಂಬಾರಿಕೆಯನ್ನು ಒಂದೊAದು ಹೆಸರಿನಿಂದ ಗುರುತಿಸಲಾಗುತ್ತಿದೆ. ಉಪ ಜಾತಿಯಲ್ಲಿ ವೀರಶೈವ ಕುಂಬಾರ, ಪ್ರಜಾಪತಿ ಕುಂಬಾರ, ಲಿಂಗಾಯತ ಕುಂಬಾರ ಸೇರಿ ಹಲವು ಉಪಪಂಗಡಗಳಿವೆ.
ಜಿಲ್ಲೆಯ ಕುಂಬಾರ ಜನಾಂಗದವರು ಉಪಜಾತಿ ಕಲಂನಲ್ಲಿ ಇದಾವುದನ್ನು ನಮೂದಿಸದೆ ಕೇವಲ ಕುಂಬಾರ ಎಂದು ನಮೂದಿಸಬೇಕು. ಈ ಮೂಲಕ ನಮ್ಮ ಸಮುದಾಯದ ನಿಖರ ಜನಸಂಖ್ಯೆಯ ಅಂಕಿ ಅಂಶ ಸಿಗಲಿದ್ದು, ಇದರಿಂದ ಒಗ್ಗಟ್ಟು ಪ್ರದರ್ಶನ ಮಾಡಿದಂತಾಗುತ್ತದೆ. ಸರ್ಕಾರಿ ಸವಲತ್ತು ಹಾಗೂ ಮೀಸಲಾತಿ ಪಡೆಯಲು ಅನುಕೂಲವಾಗಲಿದೆ ಎಂದರು.
ಹಿAದಿನ ಸಮೀಕ್ಷೆಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಕುರಿತು ನಿಖರ ಅಂಕಿ ಅಂಶ ದೊರೆತಿಲ್ಲ. ಇದರಿಂದ ಜನಾಂಗ ಅತ್ಯಂತ ಹಿಂದುಳಿದ ವರ್ಗದವರಾಗಿ ಉಳಿದು ಕೊಂಡಿದ್ದೇವೆ. ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ವಿಫಲವಾಗಿದ್ದೇವೆ ಎಂದರು.
ಆಧುನಿಕತೆ ಬೆಳೆದಂತೆ ಕುಂಬಾರಿಕೆ ಕಸುಬು ಸಂಪೂರ್ಣ ನಶಿಸಿ ಹೋಗುತ್ತಿದೆ. ಇಂದಿನ ಸ್ಟೀಲ್, ನಾಸ್ಟಿಕ್ ಸೇರಿ ವಿವಿಧ ಲೋಹಗಳ ಮಾರುಕಟ್ಟೆಯಿಂದ ಕುಂಬಾರಿಕೆ ಮರೆಯಾಗಿದೆ. ಇದರಿಂದ ನಮ್ಮ ಸಮುದಾಯದವರು ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡು ಜೀವನ ನಿರ್ವಹಣೆ ನಡೆಸುವಂತಾಗಿದೆ ಎಂದರು.
ನಮ್ಮ ಸಮುದಾಯವನ್ನು ಸರ್ಕಾರ ಗುರುತಿಸಲು ಸಂಖ್ಯಾಬಲ ಪ್ರದರ್ಶಿಸುವುದು ಅವಶ್ಯಕವಾಗಿರುವುದರಿಂದ ಸಮೀಕ್ಷೆಯಲ್ಲಿ ಕುಂಬಾರ ಜನಾಂಗದವರು ಭಾಗವಹಿಸಿ ಸರಿಯಾದ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಸಮೀಕ್ಷೆ ಆರಂಭಕ್ಕೆ ೩ ದಿನ ಮುನ್ನ ಪ್ರಶ್ನಾವಳಿಗಳನ್ನು ಪ್ರತಿ ಮನೆಗೆ ತಲುಪಿಸುವುದಾಗಿ ಆಯೋಗ ತಿಳಿಸಿತ್ತು. ಆದರೆ ಇದುವರೆಗೂ ಯಾವುದೇ ಪ್ರಶ್ನಾವಳಿ ನೀಡಿಲ್ಲ. ನೀಡಿದ್ದರೆ ಜನರು ಅದರ ಬಗ್ಗೆ ಅಧ್ಯಯನ ಮಾಡಿ ಸ್ಪಷ್ಟ ಮಾಹಿತಿ ನೀಡಲು ಅನುಕೂಲವಾಗುತ್ತಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದೊರೆಸ್ವಾಮಿ, ನಿರ್ದೇಶಕ ಸುರೇಶ್ ಪ್ರಜಾಪತಿ, ನಾಗರಾಜ್, ಕೃಷ್ಣ ಇದ್ದರು.










