ಹಾಸನ: ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆ ಮಂಗಳೂರು ಮತ್ತು ಯುವಜನ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಅ.5ರ ಭಾನುವಾರದಂದು ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆವತಿಯಿಂದ 2ನೇ ವರ್ಷದ ಮಹಿಳಾ ಹಾಗೂ ಪುರುಷ ಬೆಂಚ್‌ಪ್ರೆಸ್ ಪವರ್‌ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಅಸೋಷಿಯೇಷನ್ ಸಂಸ್ಥಾಪಕ ಕೆ. ಹನುಮಂತೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ನಗರದ ಜಿಲ್ಲಾ ಕಸಪಾ ಆವರಣದಲ್ಲಿ ಭಾನುವಾರ ನಡೆಯುವ ಸ್ಪರ್ಧೆಗೆ ಪವರ್ ಲಿಫ್ಟಿಂಗ್ ಸಂಸ್ಥೆ ಇಂಡಿಯಾ ಅಧ್ಯಕ್ಷ ಸತೀಶ್ ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.
ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ಗೆ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟು 500 ಶುಲ್ಕ ಮೊದಲು ಪಾವತಿಸಿರಬೇಕು. ಬೆಳಿಗ್ಗೆ 7 ಗಂಟೆಯಿAದ 8.30 ರವರೆಗೆ ದೇಹ ತೂಕ ಪರೀಕ್ಷೆ ನಡೆಯಲಿದೆ. ನಂತರ ಭಾಗವಹಿಸಲು ಅವಕಾಶವಿಲ್ಲ ಎಂದು ತಿಳಿಸಿದರು.
ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಮೆಡಲ್, ಪ್ರಮಾಣಪತ್ರ. ಇಲ್ಲಿ ಗೆದ್ದವರು ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗೆ ಆಯ್ಕೆ ಆಗುವರು ಎಂದರು. ಸ್ಪರ್ಧೆಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತೀರ್ಪುಗಾರರ ನಿರೀಕ್ಷೆಯಲ್ಲಿ ಪಾರದರ್ಶಕವಾಗಿ ನಡೆಯಲಿದೆ.
ಸ್ಪರ್ಧೆಗೆ ಹಾಜರಾಗುವವರು ಸರಿಯಾದ ಪವರ್ ಲಿಫ್ಟಿಂಗ್ ಉಡುಪು (ರೌಂಡ್ ನೆಕ್ ಟಿ-ಶರ್ಟ್,ಶೂಸ್) ಧರಿಸಬೇಕೆಂದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪವರ್ ಲಿಪ್ಟಿಂಗ್ ಸಂಸ್ಥೆ ಗೌರವಾಧ್ಯಕ್ಷ ಹಾಗೂ ಉದ್ಯಮಿ ವಿಜಯಕುಮಾರ್, ಖಜಾಂಚಿ ಅಶ್ವಥ್, ಸಂಘಟನಾ ಕಾರ್ಯದರ್ಶಿ ಎಂ. ಶಿವಸ್ವಾಮಿ, ನಿರ್ದೇಶಕ ಹೆಚ್.ವಿ. ಲೋಕೇಶ್ ಇದ್ದರು.










