20.1 C
Munich
Home ಕ್ರೈಮ್‌ ಹೊಳೆನರಸೀಪುರ: ಮನೆ ಕಳವು ಆರೋಪಿ ಬಂಧನ

ಹೊಳೆನರಸೀಪುರ: ಮನೆ ಕಳವು ಆರೋಪಿ ಬಂಧನ

ಹೊಳೆನರಸೀಪುರ: ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಂಗಳಾಪುರ ಮತ್ತು ಹಳ್ಳಿಮೈಸೂರು ಠಾಣಾ ವ್ಯಾಪ್ತಿಯ ಹಾವಿನ ಮಾರನಹಳ್ಳಿ ದೇವಸ್ಥಾನದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಮಹಮ್ಮದ್ ಸದ್ದಾಂ ಎಂಬಾತನನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಬಂಧಿಸಿ, ಆತನಿಂದ ೮೭೧೨ ರೂ. ಹುಂಡಿ ಹಣ ಮತ್ತು ೪೭೦ ಗ್ರಾಂ ತೂಕದ ೩ ಬೆಳ್ಳಿ ಚೆಂಬುಗಳನ್ನು ವಶ ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಪತ್ತೆ ಕಾರ್ಯದಲ್ಲಿ ಎಎಸ್ಪಿ ಶಾಲೂ ಅವರ ಮಾರ್ಗದರ್ಶನದಲ್ಲಿ ಹೊಳೆನರಸೀಪುರ ವೃತ್ತ ನಿರೀಕ್ಷಕ ಪ್ರದೀಪ್ ಅವರ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್‌ಐ ರಮೇಶ್,ಸಿಬ್ಬಂದಿಗಳಾದ ರಘು, ಚಿದಾನಂದ ಜಗದೀಶ್, ಮಂಜೇಗೌಡ, ಪಾಲಾಕ್ಷ, ಸುನೀಲ್, ಸತೀಶ್,ಚಾಲಕ ರವಿ ಮೊದಲಾದವರು ಪತ್ತೆ ಕಾರ್ಯದಲ್ಲಿ
ಶ್ರಮಿಸಿದರು.

error: Content is protected !!