0.5 C
Munich
Home ಜಿಲ್ಲೆ ಈ ಭಾನುವಾರ ಹಾಸನದಲ್ಲಿ ಎಸ್.ಎನ್.ಸೇತುರಾಮ್ ‘ಬುಕ್ ಮಾತು’

ಈ ಭಾನುವಾರ ಹಾಸನದಲ್ಲಿ ಎಸ್.ಎನ್.ಸೇತುರಾಮ್ ‘ಬುಕ್ ಮಾತು’

The ninth edition of 'Book Matu', a dialogue with authors organized by Akshara Book House, will be held at 10 a.m. on July 6 at Gandhi Bhavan on M.G. Road in the city. Actor, director, and playwright S.N. Sethuram will interact with readers.

ಹಾಸನ, ಜುಲೈ 3, 2025: ಅಕ್ಷರ ಬುಕ್ ಹೌಸ್ ಆಯೋಜಿಸುವ ಲೇಖಕರೊಂದಿಗಿನ ಸಂವಾದ ‘ಬುಕ್ ಮಾತು’ 9ನೇ ಕಾರ್ಯಕ್ರಮ  ಜುಲೈ 6 ರಂದು ನಗರದ ಎಂ.ಜಿ. ರಸ್ತೆಯ ಗಾಂಧಿ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ನಟ, ನಿರ್ದೇಶಕ ಹಾಗೂ ನಾಟಕಕಾರ ಎಸ್.ಎನ್. ಸೇತುರಾಮ್ ಓದುಗರೊಂದಿಗೆ ಸಂವಾದ ನಡೆಸಲಿದ್ದಾರೆ.

“ಮಾಯಮೃಗ” ಧಾರವಾಹಿಯ ಸಹಜ ಅಭಿನಯದ ಮೂಲಕ ಜನಮನ ಸೆಳೆದಿರುವ ಸೇತುರಾಮ್, “ಮಂಥನ”, “ಅನಾವರಣ”, “ಯುಗಾಂತರ” ಧಾರವಾಹಿಗಳ ನಿರ್ದೇಶನದಿಂದ ಪ್ರಸಿದ್ಧರಾಗಿದ್ದಾರೆ. ಇವರ ರಚನೆಯ “ದಹನ”, “ಗತಿ”, “ನಿಮಿತ್ತ”, “ನಾವಲ್ಲ” ಪುಸ್ತಕಗಳು ಹಾಗೂ “ತಳಿ” ಮತ್ತು “ಅತೀತ” ನಾಟಕಗಳು ಜನಪ್ರಿಯವಾಗಿವೆ. ವಿಶೇಷವಾಗಿ “ಅತೀತ” ನಾಟಕವು 75 ಪ್ರದರ್ಶನಗಳನ್ನು ಕಾಣುತ್ತಿದೆ.

ಅಕ್ಷರ ಬುಕ್ ಹೌಸ್‌ನ ಸಂಸ್ಥಾಪಕ ಬಿ.ಕೆ. ಗಂಗಾಧರ್,  ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಓದುಗರು ಮತ್ತು ಪುಸ್ತಕ ಪ್ರಿಯರು ಭಾಗವಹಿಸಿ, ಸೇತುರಾಮ್ ಅವರ ಕಥಾ ಸಂಕಲನ, ನಾಟಕ ಮತ್ತು ಪುಸ್ತಕಗಳ ಕುರಿತು ಸಂವಾದ ನಡೆಸುವಂತೆ ಕೋರಿದ್ದಾರೆ.

error: Content is protected !!