ಸಕಲೇಶಪುರ: ಕೊಡಗಿನಿಂದ ಬಂದ ದೈತ್ಯ ಕಾಡಾನೆಗೆ ಜಿಲ್ಲೆಯಲ್ಲಿ ಮೊದಲ ಬಲಿ- ಕೂಲಿ ಕಾರ್ಮಿಕ ಮಹಿಳೆಯನ್ನು ಕೊಂದ ಕಾಡಾನೆ

The first victim in the district of a giant wild elephant from Sakleshpur Kodagu - a wild elephant killed a laborer woman

ಸಕಲೇಶಪುರ: ತಾಲೂಕಿನ ಮೂಗಲಿಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ.

ಮೂಗಲಿ ಗ್ರಾಮದ ಶೋಭಾ (40) ಮೃತ ಮಹಿಳೆ. ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಆನೆಯ ತುಳಿತಕ್ಕೆ ಆಕೆ ಬಲಿಯಾಗಿದ್ದಾರೆ.

ಈಚೆಗೆ ಕೊಡಗಿನಿಂದ ಬಂದಿರುವ ಆಕ್ರಮಣಕಾರಿಯಾಗಿ ವರ್ತಿಸುವ ದೈತ್ಯ ಆನೆ ಮೊದಲ ಬಲಿ ಪಡೆದಿದೆ.

ಮೃತ ಮಹಿಳೆ ಶೋಭಾ ಅವರು ಒಂದೂವರೆ ಎಕರೆ ಕಾಫಿ ತೋಟವನ್ನು ಹೊಂದಿದ್ದು ಅವರ ತಾಯಿ ರಾಜಮ್ಮ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆನೆ ದಾಳಿ ಮಾಡಿದೆ.

ಆಗ ರಾಜಮ್ಮ ಅವರು ಓಡಿ ಬಚಾವಾಗಿದ್ದು ಶೋಭಾ ಅವರು ಆನೆಯ ತುಳಿತಕ್ಕೆ ಸಿಲುಕಿದ್ದಾರೆ.

ರಾಜಮ್ಮ ಅವರು ಬೆಳಗೋಡು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

The first victim in the district of a giant wild elephant from Sakleshpur Kodagu – a wild elephant killed a laborer woman