ಅರಕಲಗೂಡು: ಕೊಣನೂರು ಹೋಬಳಿಯ ಬಿದರೂರು ಗ್ರಾಮದ ಬಸವೇಗೌಡ ಮತ್ತು ಅಮ್ಮಯಮ್ಮ ದಂಪತಿಗಳ ಸುಪುತ್ರ ಯುವ ವಿಜ್ಞಾನಿ ಡಾ. ನಾಗರಾಜ್ ಬಸವೇಗೌಡ ಅವರು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಫೆಲೋ ಆಗಿ ಪ್ರವೇಶ ಪಡೆದುಕೊಂಡಿದ್ದಾರೆ.
ಕಳೆದ ಹದಿಮೂರು ವರ್ಷಗಳಿಂದ ದಕ್ಷಿಣ ಕೊರಿಯಾದ ಯೆಯುಂಗ್ನಾಮ್ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರಾಗಿ ಕ್ಯಾನ್ಸರ್ ಔಷಧ ವಿತರಣೆ ಮತ್ತು ಸಂವೇದಕ ಅಪ್ಲಿಕೇಶನ್‌ಗಳಿಗೆ ನ್ಯಾನೊಮೆಟೀರಿಯಲ್‌ಗಳ ಕುರಿತು ತಮ್ಮ ಸಂಶೋಧನೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಫೆಲೋಶಿಪ್ ಆಫ್ ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (FRSC) ಯುನೈಟೆಡ್ ಕಿಂಗ್‌ಡಂನಲ್ಲಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (RSC) ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ರಾಸಾಯನಿಕ ವಿಜ್ಞಾನಕ್ಕೆ ಗಮನಾರ್ಹ ಮತ್ತು ನಿರಂತರ ಕೊಡುಗೆಗಳನ್ನು ನೀಡಿದ ಹಿರಿಯ ವೃತ್ತಿಪರರಿಗೆ ನೀಡಲಾಗುವ ಪ್ರಶಸ್ತಿಯನ್ನು ಡಾ. ನಾಗರಾಜ್ ಬಸವೇಗೌಡ ಅವರು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಫೆಲೋ ಆಗಿ ಪ್ರವೇಶ ಪಡೆದುಕೊಂಡಿದ್ದಾರೆ.
ರಸಾಯನಶಾಸ್ತ್ರ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಮತ್ತು ನಾಯಕತ್ವವು ಹಲವು ವರ್ಷಗಳಿಂದ ಅತ್ಯುತ್ತಮ ವೃತ್ತಿಪರ ಸಾಧನೆಗಳು ಪ್ರತಿಷ್ಠಿತ ಜಾಗತಿಕ ವೈಜ್ಞಾನಿಕ ಸಂಸ್ಥೆಯಿಂದ ಅಂತರರಾಷ್ಟ್ರೀಯ ಮನ್ನಣೆ
ಸಂಶೋಧನೆ, ಶಿಕ್ಷಣ, ಉದ್ಯಮ, ನಾವೀನ್ಯತೆ, ನೀತಿ ಅಥವಾ ನಿರ್ವಹಣೆಯ ಮೂಲಕ ಕೊಡುಗೆ ನೀಡುತ್ತಾ ಬಂದಿದೆ.
ಅಮೆರಿಕಾದ ಸ್ಕ್ಯಾ ನ್ ಪೋರ್ಡ್ ವಿಶ್ವವಿದ್ಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಪ್ರಟಕವಾದ ಸಂಶೋಧನಾ ಪ್ರಕಟಣೆಗಳು, ಉಲ್ಲೇಖ ಗಳು, ಸಹ ಲೇಖಕರ ಸಂಶೋ ಧನಾ ಪ್ರಕಟಣೆಗಳು ಮತ್ತು ಎಚ್ ಇಂಡೆಕ್ಸ್ ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಶೇ.2 ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟನ್‌ಫೋರ್ಡ್ ವಿಶ್ವವಿದ್ಯಾಲಯವು ಇತ್ತೀಚೆಗೆ ಮಾಡಿದೆ. ಇವರ ಈ ಸಾಧನೆಗೆ ತಾಲ್ಲೂಕಿನ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮಗೆ ಮಾರ್ಗದರ್ಶನ ನೀಡಿದ ಮಾರ್ಗದರ್ಶಕರಿಗೆ, ಸಹೋದ್ಯೋಗಿಗಳಿಗೆ ಮತ್ತು ಕುಟುಂಬಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
Young scientist Dr. Nagaraj Basavegowda, son of Basavegowda and Ammayamma from Bidarur village in Konanur hobli, has been admitted as a Fellow of the Royal Society of Chemistry.










