ಹಾಸನ: ಧರ್ಮದ ಆಚರಣೆಯಲ್ಲೇ ರಕ್ಷಣೆ; ಕೌಟುಂಬಿಕ ಸವಾಲುಗಳಿಗೆ ಅಧ್ಯಾತ್ಮ-ವಿಜ್ಞಾನವೇ ಮದ್ದು- ಅಶೋಕ್ ಹಾರನಹಳ್ಳಿ ಹಾಗೂ ಡಾ. ಶುಭಾ ಮಧುಸೂದನ್

The community is protected by our sage traditions and religious practices. The elder said that only if we do not be corrupt and lead a valuable life, we can get respect in the society. Advocate Ashok Haranahalli proposed.

ಹಾಸನ: “ನಮ್ಮ ಋಷಿ ಪರಂಪರೆ ಮತ್ತು ಧರ್ಮದ ಆಚರಣೆಯಲ್ಲೇ ಸಮುದಾಯದ ರಕ್ಷಣೆಯಿದೆ. ನಾವು ಧರ್ಮಭ್ರಷ್ಟರಾಗದೆ, ಮೌಲ್ಯಯುತ ಜೀವನ ನಡೆಸಿದಾಗ ಮಾತ್ರ ಸಮಾಜದಲ್ಲಿ ಗೌರವ ಸಿಗಲು ಸಾಧ್ಯ” ಎಂದು ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಪ್ರತಿಪಾದಿಸಿದರು.

ಹಾಸನ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಆಯೋಜಿಸಲಾಗಿದ್ದ ದ್ವಿತೀಯ ಜಿಲ್ಲಾ ಬ್ರಾಹ್ಮಣ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಮನೆಯಲ್ಲಿ ಜೀವನ ಸಾಗಿಸುವ ಕ್ರಮವನ್ನು ನಮ್ಮ ಉಪನಿಷತ್ ಹಾಗೂ ಭಗವದ್ಗೀತೆಯು ಅದ್ಭುತವಾಗಿ ವಿವರಿಸಿದೆ. ಭಗವದ್ಗೀತೆಯು ಮನುಷ್ಯ ಸ್ವಭಾವದ ಆಳವಾದ ವಿಶ್ಲೇಷಣೆ ಮಾಡುವುದರ ಜೊತೆಗೆ ಸಂಕಷ್ಟದ ಸಮಯದಲ್ಲಿ ಜೀವನವನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ; ಇಂತಹ ಮೌಲ್ಯಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಾರನಹಳ್ಳಿ ಅವರು ತಿಳಿಸಿದರು.

ಸಮುದಾಯದ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಾ, ಮೀಸಲಾತಿಗಾಗಿ ಬೇಡುವ ಬದಲು ನಾವು ನಮ್ಮನ್ನು ತಿದ್ದಿಕೊಂಡು, ಒಗ್ಗಟ್ಟಿನಿಂದ ಪರಸ್ಪರ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

ಇದೇ ಗೋಷ್ಠಿಯಲ್ಲಿ ‘ಕೌಟುಂಬಿಕ ಸವಾಲುಗಳು ಮತ್ತು ಪರಿಹಾರ’ ಎಂಬ ವಿಷಯದ ಕುರಿತು ಮಾತನಾಡಿದ ಖ್ಯಾತ ಮನಶ್ಶಾಸ್ತ್ರಜ್ಞೆ ಡಾ. ಶುಭಾ ಮಧುಸೂದನ್ ಅವರು, ಬುದ್ಧಿವಂತಿಕೆ ಹೆಚ್ಚಾದಂತೆ ಅದರ ಜೊತೆಗೇ ಅಹಂಕಾರ ಮತ್ತು ಖಿನ್ನತೆ ಮನೆಮಾಡುವ ಸಾಧ್ಯತೆಗಳಿರುತ್ತವೆ, ಇದನ್ನು ಸಮತೋಲನ ಮಾಡುವುದೇ ಜೀವನದ ಕಲೆ ಎಂದು ಎಚ್ಚರಿಸಿದರು.

ಪೋಷಕರು ಹದಿಹರೆಯದ ಮಕ್ಕಳಿಗೆ ಪ್ರಶ್ನೆ ಕೇಳಲು ಮುಕ್ತ ಅವಕಾಶ ನೀಡಬೇಕು ಮತ್ತು ಗಂಡು ಮಕ್ಕಳನ್ನು ಅತಿಯಾದ ವಿಧೇಯರನ್ನಾಗಿ ಬೆಳೆಸದೆ ಅವರಿಗೆ ಧೈರ್ಯವನ್ನು ಕಲಿಸಬೇಕು ಎಂದು ತಿಳಿಸಿದರು.

ನಮ್ಮ ಪರಂಪರೆಯಲ್ಲಿ ಅಧ್ಯಾತ್ಮ ಮತ್ತು ವಿಜ್ಞಾನ ಬೇರೆಯಲ್ಲ, ಧಾರ್ಮಿಕತೆಯಲ್ಲೇ ವಿಜ್ಞಾನವಿದೆ ಎಂಬುದನ್ನು ಪೋಷಕರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳು ದಾರಿ ತಪ್ಪಿದಾಗ ಕೇವಲ ಶಿಸ್ತಿನ ಮೂಲಕವಲ್ಲದೆ, ಆತ್ಮೀಯ ಸಂಬಂಧದ ಮೂಲಕ ಅವರನ್ನು ಸರಿಹಾದಿಗೆ ತರಬೇಕು ಎಂದು ಅವರು ಕಿವಿಮಾತು ಹೇಳಿದರು.

ಬ್ರಾಹ್ಮಣ ಸಮುದಾಯವು ಕೇವಲ ಸೇವೆಯನ್ನೇ ಮಾಡದೆ ವೃತ್ತಿಗೆ ತಕ್ಕ ಬೆಲೆ ಪಡೆಯುವ ಗುಣ ಬೆಳೆಸಿಕೊಳ್ಳಬೇಕು ಮತ್ತು ಉದ್ಯಮಶೀಲತಾ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಉಭಯ ಗಣ್ಯರು ಸಮುದಾಯಕ್ಕೆ ಕರೆ ನೀಡಿದರು.

ವೇದಿಕೆಯಲ್ಲಿ ರಾಮಕೃಷ್ಣ ವಿದ್ಯಾಲಯದ ಮುಖ್ಯಸ್ಥೆ ಶ್ರೀ ಲಕ್ಷ್ಮಿ, ಚಂದ್ರಶೇಖರ್, ಮಂಜುನಾಥ ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

The community is protected by our sage traditions and religious practices. The elder said that only if we do not be corrupt and lead a valuable life, we can get respect in the society. Advocate Ashok Haranahalli proposed.