ಹಾಸನ: ರಾಜೀವ್ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸರ್ಕಾರದಿಂದ ಸ್ವಾಯತ್ತ ಸ್ಥಾನಮಾನ

The city's Rajiv Technical College has been granted autonomous status with the approval of the Karnataka government with effect from the academic year 2025-26. The college had earlier received approval from the University Grants Commission (UGC).

ಹಾಸನ: ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯವು 2025-26 ನೇ ಸಾಲಿನಿಂದ ಅನ್ವಯವಾಗುವಂತೆ ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ ಸ್ವಾಯತ್ತ  ಸ್ಥಾನಮಾನ ಪಡೆದಿದೆ. ಈ ಮೊದಲೇ ಕಾಲೇಜು ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಅನುಮೋದನೆ ಪಡೆದಿತ್ತು.

ನಗರದ ಹೆಸರಾಂತ ಮಕ್ಕಳ ತಜ್ಞರಾದ ದಿ. ಡಾ.ವಿ. ರಾಜೀವ್ ಅವರ ಶ್ರಮದ ಫಲವಾಗಿ ರಾಜೀವ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ2008ರಲ್ಲಿ 4 ವಿಭಾಗಗಳೊಂದಿಗೆ ಪ್ರಾರಂಭವಾದ ಈ ತಾಂತ್ರಿಕ ಕಾಲೇಜು, ಇಂದು9 ಪದವಿ ವಿಭಾಗಗಳು, 1 ಸ್ನಾತಕೋತ್ತರ ಪದವಿ ವಿಭಾಗ ಹಾಗೂ 5 ಸಂಶೋಧನಾ ವಿಭಾಗಗಳೊಂದಿಗೆ 2050ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

2024ರಲ್ಲಿ ಈ ಸಂಸ್ಥೆಯು ಎನ್‌ಬಿಎ ಮಾನ್ಯತೆ ಪಡೆಯುವುದರೊಂದಿಗೆ ಅದೇ ವರ್ಷ ಎ ಶ್ರೇಣಿಯೊಂದಿಗೆ ನ್ಯಾಕ್ ಮಾನ್ಯತೆ ಸಹ ಪಡೆದಿದೆ. ಸ್ವಾಯತ್ತ ಸ್ಥಾನಮಾನ ಪಡೆಯುವುದರಿಂದ ಕಾಲೇಜಿಗೆ ಉದ್ಯಮ ಆಧಾರಿತ ಪಠ್ಯಕ್ರಮ ವಿನ್ಯಾಸಗೊಳಿಸುವ ಅವಕಾಶ ಹೊಂದುವುದರ ಜೊತೆಗೆ ತನ್ನದೇ ಆದ ಪರೀಕ್ಷೆ ನಡೆಸುವ, ಪ್ರಶ್ನೆ ಪತ್ರಿಕೆಗಳನ್ನು ಹೊಂದಿಸುವ ಮತ್ತು ಆಂತರಿಕವಾಗಿ ಪ್ರವೇಶ ಪ್ರಕ್ರಿಯೆ ನಿರ್ವಹಿಸುವ ಅಧಿಕಾರವಿರುತ್ತದೆ.

ಸಂಸ್ಥೆಯು ಕೈಗಾರಿಕೆಗಳೊಂದಿಗೆ ನೇರ ಸಹಯೋಗ ಸ್ಥಾಪಿಸಲು ಸಾಧ್ಯವಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಉದ್ಯೋಗಾವಕಾಶ ದೊರೆಯುತ್ತವೆ. ಸ್ವಾಯತ್ತ ಸ್ಥಾನಮಾನ ಪಡೆದುದಕ್ಕಾಗಿ ರಾಜೀವ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ರಚನಾ ರಾಜೀವ್, ಉಪಾಧ್ಯಕ್ಷ ಡಾ.ರಂಜಿತ್ ರಾಜೀವ್, ಕಾರ್ಯದರ್ಶಿ ಡಾ.ಬಿ.ಎನ್. ರತ್ನ ಅವರು ಕಾಲೇಜಿನ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸುವುದರ ಜೊತೆಗೆ ಈ ಸ್ಥಾನಮಾನ ಪಡೆಯಲು ಶ್ರಮಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಪಿ.ಕೆ., ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದ್ದಾರೆ.