ಸಕಲೇಶಪುರ: ಕಳುವಾಗಿದ್ದ ಪತ್ರಕರ್ತರ ಮೊಬೈಲ್ ವೊಂದನ್ನು ಹುಡುಕಿಸಕಲೇಶಪುರ: ಕಳುವಾಗಿದ್ದ ಮೊಬೈಲ್ ನ್ನು ಹುಡುಕಿಕೊಟ್ಟ ಪೋಲಿಸರುಕೊಡುವಲ್ಲಿ ನಗರ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜೈಭೀಮ್ ಮಂಜುರವರು ಸುದ್ದಿಗೋಷ್ಠಿವೊಂದನ್ನು ನಡೆಸುವಾಗ ಅವರ ಮೊಬೈಲ್ ನ್ನು ಕಿಡಿಗೇಡಿಗಳು ಕಳವು ಮಾಡಿದ್ದರು. ಜೈಭೀಮ್ ಮಂಜುರವರಿಂದ ಮೊಬೈಲ್ ನ ಬಿಲ್, ಇ.ಎಮ್.ಇ ಸಂಖ್ಯೆಗಳನ್ನು ಪಡೆದ ನಗರ ಠಾಣೆ ಪೋಲಿಸರು ಕಳುವಾದ ಮೊಬೈಲ್ ನ್ನು ಪತ್ತೆ ಹಚ್ಚಿ ಮೊಬೈಲ್ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
ಕಳೆದು ಹೋಗಿದ್ದ ಮೊಬೈಲ್ ನ್ನು ಪತ್ತೆ ಹಚ್ಚಿಕೊಟ್ಟ ನಗರ ಠಾಣೆ ವೃತ್ತ ನಿರೀಕ್ಷಕ ವನರಾಜ್ , ಪಿ.ಎಸ್.ಐ ಮಹೇಶ್, ಪೋಲಿಸ್ ಪೇದೆ ಚಂದ್ರಕಾಂತ್ ಹಾಗೂ ಇತರ ಸಿಬ್ಬಂದಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದೆ.










