ಓಲಾ-ಬೈಕ್‌ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ
ಹಾಸನ: ಮಧ್ಯರ‍್ತಿಗಳಾಗಿ ಕೆಲಸ ನರ‍್ವಹಿಸುತ್ತಿರುವ ಓಲಾ, ಉಬರ್, ರಾಪಿಡೋ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಆಟೋ ಚಾಲಕರ ಮಜ್ದೂರ್ ಸಂಘದಿಂದ ಮೌನ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಕೆ. ದಿಲೀಪ್ ಕುಮಾರ್ ಮತ್ತು ಜಿಲ್ಲಾಧ್ಯಕ್ಷ ಜಾನಿ ಮಾಧ್ಯಮದೊಂದಿಗೆ ಮಾತನಾಡಿ, ಚಾಲಕರಾದ ನಾವು ಅಸಂಘಟಿತ
ಕರ‍್ಮಿಕ ರ‍್ಗಕ್ಕೆ ಸೇರಿದ್ದು, ಸಮಾಜದಲ್ಲಿ ಯಾವುದೇ ಸವಲತ್ತು ಸಿಗದೇ ನಿರುದ್ಯೋಗಿಯಾಗಿದ್ದೇವೆ ಎಂದರು
ಜೀವನೋಪಾಯಕ್ಕಾಗಿ ಆಟೋರಿಕ್ಷಾ ಚಾಲಕರಾಗಿ ಜೀವನ ಸಾಗಿಸುತ್ತಿದ್ದೇವೆ. ಇತ್ತೀಚೆಗೆ ಖಾಸಗಿ ಆಪ್ ಮತ್ತು ಅಗ್ರಿಗೇಟರ್ ಹೆಸರಿನಲ್ಲಿ ನಮ್ಮನ್ನು ಮತ್ತು ನಮ್ಮ ಸರ‍್ವಜನಿಕರನ್ನು ದೋಚುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಕುಟುಂಬ ನರ‍್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಟೋ ಚಾಲನೆ ವೃತ್ತಿಯನ್ನೇ ಅವಲಂಬಿಸಿದ್ದೇವೆ ಎಂದರು.
ಇಷ್ಟು ರ‍್ಷಗಳ ನಂತರ ಮಧ್ಯರ‍್ತಿಗಳಾಗಿ ಕೆಲಸ ನರ‍್ವಹಿಸುತ್ತಿರುವ ಓಲ್ವಾ, ಉಬರ್, ರಾಪಿಡೋ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳನ್ನು ನಿಷೇಧಿಸಿ ಎಂಬ ಆದೇಶ ಇದ್ದರೂ ಹಾಗೂ ರ‍್ಕಾರ ಹಾಗೂ ನ್ಯಾಯಾಲಯ ತರ‍್ಪಿನ ಮೇರೆಗೆ ಖಾಸಗಿ ಸಂಸ್ಥೆಗಳನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ ಆದರೂ ಕೆಲವು ಅಗ್ರಿಗೇಟರ್ ಕಂಪನಿಗಳು ನಮ್ಮ ಜಿಲ್ಲೆಗೆ ಆಪ್ ಮುಖಾಂತರ ಕೆಲವು ಕಂಪನಿಗಳು ಅನಧಿಕೃತವಾಗಿ ನಮ್ಮ ಆಟೋ ಚಾಲಕರಿಗೆ ಹಣದ ಆಸೆ ತೋರಿಸಿ ಆಫ್ ಡೌನ್ಲೌಡ್ ಮಾಡಿ ನಮ್ಮ ಅಟೋ ಚಾಲಕರ ವಿರುದ್ಧವಾಗಿ ಸಮಸ್ಯೆ ಮತ್ತು ವೈಮನಸ್ಯ ಉಂಟು ಮಾಡುತ್ತಿದ್ದು,ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಹಿತಕರ ಘಟನೆ ಹಾಗೂ ಕಾನೂನು ಭಂಗವಾದರೆ ಖಾಸಗಿ ಕಂಪನಿಗಳೇ ನೇರ ಹೊಣೆ. ಸಮಾಜಮುಖಿ ಕೆಲಸ ನರ‍್ವಹಿಸುವ ನಮ್ಮನ್ನು( ಆಟೋ ಚಾಲಕರನ್ನು) ಪರಿಗಣಿಸಿ ಖಾಸಗಿ ಮಧ್ಯರ‍್ತಿಗಳನ್ನು ನಿಷೇಧಿಸಬೇಕಾಗಿ ವಿನಂತಿಸಿದರು.
ಹಾಸನದಲ್ಲಿ ೪೦೦೦ ಆಟೋ ಚಾಲಕರು ಕರ‍್ಯನರ‍್ವಹಿಸುತ್ತಿದ್ದು, ಸಾರಿಗೆ ಇಲಾಖೆಯಲ್ಲಿ ಒಂದು ಸೇವಾ ಕೇಂದ್ರವನ್ನು ಅಟೋ ಚಾಲಕರಿಗೆ ಮಾಡಿಕೊಡು, ಆಟೋ ಮೀಟರ್ ಅಧಿಕಾರಿಯನ್ನು ಹಾಸನಕ್ಕೆ ನಿಯೋಜನೆ ಮಾಡಲಾಗಿದ್ದು, ಆದರೆ ಅವರಿಗೆ ಅಧಿಕ ಹೊರೆಯಿದೆ ಎಂದು ಹೇಳುತ್ತಾರೆ. ವಾರಕ್ಕೆ ಎರಡು ದಿನ ಸತ್ಯ ಮಾಪನ ಮುದ್ರೆ ಮಾಡುತ್ತಿದ್ದು, ೪೦೦೦ ಆಟೋ ಚಾಲಕರಿಗೆ ಜಿಲ್ಲೆಯಲ್ಲಿ ತುಂಬಾ ತೊಂದರೆ ಆಗಿರುವುದರಿಂದ ಅದಕ್ಕಾಗಿ ಪ್ರತಿನಿತ್ಯ ಮಾಪನಕ್ಕೆ ಆದೇಶ ನೀಡಬೇಕಾಗಿ ಕೋರಿದರು.
ಹೊಳೆನರಸೀಪುರ ತಾಲೂಕು ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಸುನೀಲ್, ಸದಸ್ಯ ದಿನಾಕರ್, ಪಾಲರಾಜು, ನಿರಂಜನ್, ಹಾಸನ ಪ್ರಧಾನ ಕರ‍್ಯರ‍್ಶಿ ಯಶವಂತ್, ಕರ‍್ಯರ‍್ಶಿ ಹರೀಶ್, ಸತೀಶ್, ರಂಗನಾಥ್, ಕಾನೂನು ಸಲಹೆಗಾರ ಅಶೋಕ್, ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಆನಂದ್ ಮೊದಲಾದವರಿದ್ದರು.










