ಗಂಡಸಿ: ಓಂ ಶ್ರೀ ಗಣಪತಿ ಉತ್ಸವ ಸಮಿತಿ, ಹಾಗೂ ಚಾಲೆಂಜ್ ಬಾಯ್ಸ್ ಗಂಡಸಿ ಇವರ ಆಶ್ರಯದಲ್ಲಿ ಶ್ರೀ ದೊಡ್ಡಮ್ಮ ಚಿಕ್ಕಮ್ಮದೇವಿ ದೇವಾಲಯದ ಬಳಿ ಪ್ರತಿಷ್ಠಾಪಿಸಿದ್ದ18ನೇ ವರ್ಷದ ಓಂ ಶ್ರೀ ಗಣಪತಿಯವರ ಉತ್ಸವಕ್ಕೆ ಶನಿವಾರ ರಾತ್ರಿ 9 ಗಂಟೆಗೆ ಚಾಲನೆ ನೀಡಲಾಯಿತು.
ಉತ್ಸವದ ಪ್ರಯುಕ್ತ ಗಂಡಸಿಯ ಪ್ರತಿಯೊಂದು ಬೀದಿಗಳಲ್ಲಿ ನಾರಿಮಣಿಯರು ರಂಗೋಲಿ ಚಿತ್ತಾರ ಹಾಗೂ ಬಣ್ಣ ಬಣ್ಣದ ವಿದ್ಯುದ್ವೀಪಗಳ ಅಲಂಕಾರ ಮುದ್ದು- ಗುಂಡಿನ ಬಾಣ ಬಿರುಸುಗಳ ಚಮತ್ಕಾರ ಉತ್ಸವಕ್ಕೆ ಆಗಮಿಸಿದ್ದ ನೋಡುಗರ ಕಣ್ಮನ ತಣಿಸುವಂತಿತ್ತು ಪ್ರಮುಖ ರಾಜಭೀದಿಗಳಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಉತ್ಸವ ಆಚರಣೆ ಮಾಡಿ ಭಾನುವಾರ ಬೆಳಿಗ್ಗೆ ಗಂಡಸಿ ದೊಡ್ಡಕೆರೆಯಲ್ಲಿ ಶ್ರೀ ಸ್ವಾಮಿಯವರನ್ನು ಸಕಲ ಬಿರುದಾವಳಿ ಮತ್ತು ವೇದಘೋಷಗಳ ಘೋಷಣೆಯೊಂದಿಗೆ ವಿಸರ್ಜಿಸಲಾಯಿತು.
ರಾತ್ರಿ 10:೦೦ ಗಂಟೆಗೆ ಪ್ರಾರಂಭವಾದ ಮೆರವಣಿಗೆಯಲ್ಲಿ ಯುವಕ ಯುವತಿಯರು ಹಿಂದೂ– ಮುಸ್ಲಿಂ ಎಂಬ ಬೇದ ಭಾವವಿಲ್ಲದೆ ಭಾವೈಕ್ಯತೆಯಿಂದ ಡಿ.ಜೆ. ಸೌಂಡಿಗೆ ಕುಣಿದು ಕುಪ್ಪಳಿಸಿ ಯುವ ಜನತೆ ಭಾವೈಕ್ಯಯ ಸಂದೇಶ ಸಾರಿದರು ಜೊತೆಗೆ ಡೊಳ್ಳುಕುಣಿತ, ವೀರಭದ್ರನ ಕುಣಿತ, ವೀರಗಾಸೆ ನರ್ತನ, ಕರಡೆ ವಾದ್ಯ, ಚಂಡೆ ವಾದ್ಯ ಕೀಲುಕುದುರೆ ನರ್ತನ, ತಮಟೆ ವಾದ್ಯದ ಸದ್ದಿಗೆ ಯುವಕ ಯುವತಿಯರು ಕುಣಿತದ ಹೆಜ್ಜೆಹಾಕಿದರು ವಿಸರ್ಜನೆ ಮಹೋತ್ಸವದ ಅಂಗವಾಗಿ ಗಂಡಸಿ ಬಸವೇಶ್ವರ ವೃತ್ತದ ಬಳಿ ಚಾಲೆಂಜ್ ಬಾಯ್ಸ್ ಯುವಕರ ಬಳಗದ ವತಿಯಿಂದ ಉತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶನಿವಾರ ರಾತ್ರಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಯಿತು.










