ಬೇಲೂರು: ಪುರಸಭೆ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕಸ್ವಾಮಿ ದೇವಾಲಯದಲ್ಲಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಟ್ರಸ್ಟ್ ವತಿಯಿಂದ ದೇವಾಲಯದ ೧೫ನೇ ವರ್ಷದ ವಾರ್ಷಿಕೋತ್ಸವ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು.
ಮುಂಜಾನೆಯಿಂದಲೇ ಗಣಪತಿ ಹೋಮ, ಹವನ, ಅಷ್ಟೋತ್ತರ ಶತಪರಾಯಣ, ಲಲಿತಾಸಹಸ್ರನಾಮ, ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಪರ ವಾತಾವರಣದಲ್ಲಿ ಜರುಗಿದವು. ವೈದಿಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ದೇವರಿಗೆ ಅಲಂಕಾರ, ಮಹಾಮಂಗಳಾರತಿ ಭಕ್ತರ ಹರ್ಷೋದ್ಗಾರಗಳ ಮಧ್ಯೆ ಜರುಗಿತು.
ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿ ಶ್ರೀಗಣೇಶನ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅದ್ಯಕ್ಷ ಎ ಆರ್ ಅಶೋಕ್ ಹಾಗೂ ಕಾಂಗ್ರೆಸ್ ಮುಖಂಡ ಬಿ ಎಂ ಸಂತೋಷ್ ಮಾತನಾಡಿ – “ಶ್ರೀ ವರಸಿದ್ಧಿ ವಿನಾಯಕಸ್ವಾಮಿ ದೇವಾಲಯವು ಕಳೆದ ೧೫ ವರ್ಷಗಳಿಂದ ಬೇಲೂರು ಪಟ್ಟಣದ ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದ್ದು, ಪ್ರತಿವರ್ಷ ಭಕ್ತರ ಸಹಕಾರದಿಂದ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗುತ್ತಿವೆ. ಸಂಕಷ್ಟ ಹರ ಚತುರ್ಥಿ ಸಮಯದಲ್ಲಿ ಭಕ್ತರ ದಂಡೇ ಹೆಚ್ಚಿರುತ್ತಾರೆ.ಭಕ್ತರ ಕೋರಿಕೆಯನ್ನು ಈಡೇರಿಸುವ ಗಣಪ ಎಂದೇ ಪ್ರಸಿದ್ದಿಯಾಗಿದ್ದು ಸಕಲ ಇಷ್ಟಾರ್ಥಹಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.
ಅಲ್ಲದೆ ಈ ದೇವಾಲಯಕ್ಕೆ ಮೇಲ್ಚಾವಣಿ ಹಾಗು ವಿದ್ಯುತ್ ವ್ಯವಸ್ಥೆಯನ್ನು ಆದಷ್ಟು ಸೌಕರ್ಯಗಳನ್ನು ಒದಗಿಸಿ ಭಕ್ತರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು” ಎಂದರು .
ಕಾರ್ಯಕ್ರಮದಲ್ಲಿಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಟ್ರಸ್ಟ್ ಅದ್ಯಕ್ಷ ವಿರುಪಾಕ್ಷ, ಸೌಮ್ಯ ಆನಂದ್,ಹೊನ್ನಪ್ಪ ಟೀನು,ಡಾ ಚಂದ್ರಮೌಳಿ, ಪ್ರಕಾಶ್ ,ಕೇಶವಮೂರ್ತಿ ,ಸ್ಥಳೀಯ ನಾಯಕರು, ಟ್ರಸ್ಟ್ ಸದಸ್ಯರು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಶ್ರೀ ವಿನಾಯಕಸ್ವಾಮಿಯ ಕೃಪೆ ಕೋರಿ ಧನ್ಯರಾದರು.










