14.6 C
Munich
Home News ಹಾಸನ: ಖಾಸಗಿ ಶಾಲೆಗಳ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ ಪ್ರದಾನ

ಹಾಸನ: ಖಾಸಗಿ ಶಾಲೆಗಳ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ ಪ್ರದಾನ

ಹಾಸನ: teachers-of-private-schools-were-felicitated-at-the-teachers-day-celebrations-held-at-the-hassanamba-kalakshetra-in-the-city-on-thursday-by-the-hassan-district-administration-zilla-panchayat-schoo

ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಗುರುವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ಖಾಸಗಿ ಅನುದಾನ ರಹಿತ ಶಾಲೆಗಳ ಜಿಲ್ಲಾ ಅತ್ಯುತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ ನೀಡಿಲಾಯಿತು. ಆಲೂರು ತಾ. ದ ಮನ್ಸೂರ್ ಶಾಲೆ ಶಿಕ್ಷಕ ಮೊಹ್ಸಿನ್ ಅಲಿ, ಅರಕಲಗೂಡು ತಾ. ನಿವೇದಿತಾ ಶಾಲೆಯ ಬಿ.ಎಂ. ರಾಗಿಣಿ, ಅರಸೀಕೆರೆ ತಾ. ಜಾವಗಲ್‌ನ ಮಾಡೆಲ್ ಆಂಗ್ಲ ಶಾಲೆಯ ಪ್ರಸನ್ನ ಕುಮಾರ್, ಬೇಲೂರು ತಾ. ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯ ಶಾಲಿನಿ ಕೇಶವ್, ಚನ್ನರಾಯಪಟ್ಟಣ ತಾ. ಜ್ಞಾನಸಾಗರ ಇಂಟರ್‌ನ್ಯಾಷನಲ್ ಶಾಲೆಯ ವಿಜಿ ಪಿ.ಜೆ., ಹಾಸನ ತಾ. ವಿಜಯ ಶಾಲೆಯ ಅನಿತ ಜೆ. ಹಾಗೂ ವಿದ್ಯಾಸೌಧ ಶಾಲೆಯ ಮಮತಾ ಎಂ.ಜೆ., ಹೊಳೆನರಸೀಪುರ ತಾ. ವಾಸವಿ ಶಾಲೆಯ ಜಯಶಂಕರ್ ಹಾಗೂ ಸಕಲೇಶಪುರ ತಾ. ಗಣಪಯ್ಯ ರೋಟರಿ ಮೂಕ ಮತ್ತು ಕಿವುಡ ಮಕ್ಕಳ ಶಾಲೆಯ ಶಿಕ್ಷಕ ಈಶ್ವರಪ್ಪ ಹಕಾರಿ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಮಾತನಾಡಿದ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಬಿ.ಈ. ಶಿವರಾಮೇಗೌಡ ಅವರು, ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತಮಂಡಳಿಗಳ ಒಕ್ಕೂಟದ ಒತ್ತಾಯದ ಮೇರೆಗೆ, ಹಾಸನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಂತಹ ಉತ್ತಮ ಕಾರ್ಯಕ್ಕೆ ಕಳೆದ ಐದು ವರ್ಷಗಳಿಂದ ಚಾಲನೆ ನೀಡಿದೆ. ಖಾಸಗಿ ಶಾಲೆಗಳ ಶಿಕ್ಷಕರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಧನ್ಯವಾದಗಳು ಎಂದರು.

ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಟೈಮ್ಸ್ ಗಂಗಾಧರ್ ಬಿ.ಕೆ., ವಿಜಯ ಶಾಲೆಯ ಮುಖ್ಯಸ್ಥೆ ತಾರಾ ಎಸ್. ಸ್ವಾಮಿ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.

error: Content is protected !!