19.5 C
Munich
Home News ಹಾಸನ: ಆ.9 ರಿಂದ ವೀರಶೈವ ಮಹಾಸಭಾ ಪದಾಧಿಕಾರಿಗಳಿಗೆ ಮೈಸೂರು ವಿಭಾಗ ಮಟ್ಟದ 2 ದಿನಗಳ ಕಾರ್ಯಾಗಾರ

ಹಾಸನ: ಆ.9 ರಿಂದ ವೀರಶೈವ ಮಹಾಸಭಾ ಪದಾಧಿಕಾರಿಗಳಿಗೆ ಮೈಸೂರು ವಿಭಾಗ ಮಟ್ಟದ 2 ದಿನಗಳ ಕಾರ್ಯಾಗಾರ

ಹಾಸನ: ಇದೇ ತಿಂಗಳು ೯ ರಿಂದ ೧೦ರ ವರೆಗೂ ವೀರಶೈವ ಮಹಾಸಭಾದ ಮೈಸೂರು ವಿಭಾಗ ಮಟ್ಟದ, ವಿಭಾಗಗಳ ಪದಾಧಿಕಾರಿಗಳಿಗೆ ಎರಡು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅರಕಲಗೂಡು ದೊಡ್ಡಮಠದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅರಕಲಗೂಡು ದೊಡ್ಡಮಠದ ಮಠಾಧಿಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಮತ್ತು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಕಾರ್ಯಗಾರ ಏರ್ಪಡಿಸಿದ್ದು, ಅಂದು ಬೆಳಗ್ಗೆ ೮ ಗಂಟೆಗೆ ಧ್ವಜಾರೋಹಣ ನಡೆಯಲಿದೆ ಎಂದರು. ದಿವ್ಯ ಸಾನಿಧ್ಯವನ್ನು ಹಾಸನ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರಸ್ವಾಮೀಜಿ, ಆಲೂರು ತಾಲೂಕು ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ದಿವ್ಯಸಾನಿಧ್ಯವನ್ನು ಬೆಳಿಗ್ಗೆ ೧೦.೩೦ಕ್ಕೆ ಬಾಳೆ ಹೊಸೂರು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಜಿ ಹಾಗೂ ಅರಕಲಗೂಡು ದೊಡ್ಡಮಠದ ಮಠಾಧಿಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನೆರವೇರಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ ಎಂದರು.

ಕಾರ್ಯಾಗಾರದ ಉದ್ಘಾಟನೆಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೆರವೇರಿಸುವರು. ಆಶಯ ನುಡಿಯನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಂಡಳಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಆಡುವರು. ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಂಡಳಿ ಜಿಲ್ಲಾಧ್ಯಕ್ಷ ಪರಮೇಶ್ ನವಿಲೆ ನಡೆಸಿಕೊಡುವರು. ಇದಾದ ನಂತರ ವಚನ ಲೋಕಾರ್ಪಣೆ, ಅಧಿವೇಶನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು. ಆಗಸ್ಟ್ ೧೦ರ ಭಾನುವಾರದಂದು ಬೆಳಿಗ್ಗೆ ಯೋಗಭ್ಯಾಸ ಬೆಳಿಗ್ಗೆ ೬ ರಿಂದ ೭ ಗಂಟೆವರೆಗೂ ನಡೆಯಲಿದೆ. ಇದಾದ ನಂತರ ೩ನೇ ಅಧಿವೇಶನದ ಮೂಲಕ ಒಟ್ಟು ೫ ಅಧಿವೇಶನ ಜರುಗಲಿದೆ. ಕಾರ್ಯಾಗಾರದ ಸಮಾರೋಪ ಸಮಾರಂಭವು ಮಧ್ಯಾಹ್ನ ೩:೩೦ಕ್ಕೆ ನಡೆಯಲಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಂಡಳಿ ಜಿಲ್ಲಾಧ್ಯಕ್ಷ ಪರಮೇಶ್ ನವಿಲೆ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಕರ್ನಾಟಕ ರಾಜ್ಯ ಹಾಗೂ ಹಾಸನ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ಘಟಕಗಳ/ ವಿಭಾಗಗಳ ಪದಾಧಿಕಾರಿಗಳಿಗೆ ಎರಡು ದಿನದ ಕಾರ್ಯಾಗಾರವನ್ನು ಪುಷ್ಪಗಿರಿ ಮಹಾಸಂಸ್ಥಾನ ಶ್ರೀ ಮಠ ಪುಷ್ಪಗಿರಿ ಹಳೇಬೀಡು ಇಲ್ಲಿ ಮಾಡಲಾಗುತ್ತದೆ. ವಿಜಯಕುಮಾರ ಸ್ವಾಮೀಜಿ ತಣ್ಣೀರುಹಳ್ಳ ಮಠ, ಫಕೀರ ದಿಂಗಾಲೇಶ್ವರ ಮಹಾಸ್ವಾಮಿ ಇವರು ಈ ಕಾರ್ಯಕ್ರಮದ ದಿವ್ಯ ಸಾನಿಧ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ ಸಚಿವ ಈಶ್ವರ್ ಕಂಡ್ರೆ ಅವರು ನಿರ್ವಹಿಸಲಿದ್ದಾರೆ, ಸಮಾರೋಪ ನುಡಿಯನ್ನು ಶಂಕರ ಬಿದರಿ ಅವರು ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ತಿಂಡಿ, ಊಟ ಹಾಗೂ ವಸತಿ ವ್ಯವಸ್ಥ್ನೆ ಮಾಡಲಾಗಿದೆ ಎಂದು ತಿಳಿಸಿದರು. ಶಿಬಿರಾರ್ಥಿಗಳು ಶಿಸ್ತು ಮತ್ತು ಸಮಯ ಪಾಲನೆಗೆ ಒತ್ತು ನೀಡಬೇಕು, ಯೋಗ ಶಿಕ್ಷಣಕ್ಕೆ ಅಗತ್ಯವಾದ ಉಡುಪು ತರಬೇಕು ಹಾಗೂ ಪದಾಧಿಕಾರಿಗಳು ಎರಡು ದಿನ ಶಿಬಿರದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರವಿ ಕುಮಾರ್, ಯತೀಶ್, ಸುರೇಶ್, ಕಟ್ಟಾಯ ಶಿವಕುಮಾರ್ ಇದ್ದರು.

 

 

error: Content is protected !!