ಹಾಸನ: ದಿ.ಡಾ.ಎ.ಸಿ. ಮುನಿವೆಂಕಟೇಗೌಡ ಅವರ ಹುಟ್ಟುಹಬ್ಬ ಅಂಗವಾಗಿ ಜಿಲ್ಲಾ ಮಟ್ಟದ ಕರಾಟೆ-ಜೂಡೋ ಸ್ಪರ್ಧೆ ಆರಂಭ

Sports Council Secretary Niranjan and his team have been conducting sports. Judo is not very well known here. He said that such a competition is useful.

ಹಾಸನ: ನಗರದ ಮಹಾರಾಜ ಪಾರ್ಕ್ ಆವರಣದಲ್ಲಿರುವ ಹೆಲ್ತ್ ಜಿಮ್ ಆವರಣದಲ್ಲಿ ಜಿಲ್ಲಾ ಕ್ರೀಡಾ ಪರಿಷತ್ ವತಿಯಿಂದ ಖ್ಯಾತ ಹಿರಿಯ ವೈದ್ಯ ಹಾಗೂ ಸಮಾಜ ಸೇವಕ ದಿ.ಡಾ.ಎ.ಸಿ. ಮುನಿವೆಂಕಟೇಗೌಡ ಅವರ ಜನ್ಮದಿನದ ಅಂಗವಾಗಿ ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ಕರಾಟೆ ಮತ್ತು ಜೂಡೋ ಎರಡು ದಿನಗಳ ಸ್ಪರ್ಧೆಗಳಿಗೆ ಹಸಿರು ಭೂಮಿ ಪ್ರತಿಷ್ಠಾಪನ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಒಬ್ಬ ಸರಕಾರಿ ವೈದ್ಯರಾಗಿ ಹಾಸನಕ್ಕೆ ಬಂದು ನಂತರ ಜನತಾ ಕ್ಲಿನಿಕ್ ಸ್ಥಾಪನೆ ಮಾಡಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಗುಣ ಮಟ್ಟದ ವೈದ್ಯಕೀಯ ಸೇವೆ ನೀಡುತ್ತಾ ಅಪಾರ ಜನಮನ್ನಣೆ ಗಳಿಸಿದವರು. ಎಲ್ಲಾ ತರಹದ ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುತ್ತಾ ಬಂದರು. ಸಂಜೀವಿನಿ ಸಹಕಾರ ಆಸ್ಪತ್ರೆಯಲ್ಲೂ ಕೂಡ ಅವರದು ದೊಡ್ಡ ಪಾತ್ರವಿದೆ ಎಂದರು.
ಕ್ರೀಡಾ ಪರಿಷತ್ತಿನ ಕಾರ್ಯದರ್ಶಿ ನಿರಂಜನ್ ಮತ್ತು ಅವರ ತಂಡ ಕ್ರೀಡೆಗಳನ್ನು ನಡೆಸುತ್ತಾ ಬರುತ್ತಿದೆ. ಜೂಡೋ ಬಗ್ಗೆ ಇಲ್ಲಿ ಅಷ್ಟೊಂದು ಪರಿಚಯ ಇಲ್ಲ. ಇಂತಹ ಸ್ಪರ್ಧೆ ಉಪಯುಕ್ತವಾಗಿದೆ ಎಂದು ಕಿವಿಮಾತು ಹೇಳಿದರು. ಈ ಸ್ಪರ್ಧೆ ಕೂಡ ಎರಡು ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಡಾ.ಎ.ಸಿ.ಎಂ. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಜಯಲಕ್ಷ್ಮಿ ಮುನಿವೆಂಕಟೇಗೌಡ ಮಾತನಾಡಿ, ಡಾ. ಎ.ಸಿ. ಮುನಿವೆಂಕಟೇಗೌಡರು ಕ್ರೀಡಾ ಮನೋಭಾವ ಹೊಂದಿದವರು. ಚಿಕ್ಕ ವಯಸ್ಸಿನಲ್ಲಿಯೇ ಪ್ರತಿ ಆಟಕ್ಕೂ ಮಹತ್ವ ಕೊಡುತ್ತಿದ್ದರು. ಹಳ್ಳಿಗಳ ಆಟೋಟ ಹಾಗೂ ಬೆಳೆಯುತ್ತಾ ಶಾಲಾ ಕಾಲೇಜಿನಲ್ಲಿಯೂ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು. ಅನೇಕ ಪ್ರಶಸ್ತಿ ಪಡೆದುಕೊಂಡಿದ್ದರು. ಕ್ರೀಡೆ ಮತ್ತು ಸಂಗೀತದ ಹವ್ಯಾಸ ಅಳವಡಿಸಿಕೊಂಡು ಬಂದಿದ್ದರು. ನಿರಂಜನ್ ಅವರ ಸಹಕಾರದಲ್ಲಿ ಇಂತಹ ಕ್ರೀಡೆಗಳು ನಡೆಯುತ್ತಾ ಬರುತ್ತಿದೆ ಎಂದು ಹೇಳಿದ ಅವರು ಇಂತಹ ಕ್ರೀಡೆ ಮೂಲಕ ದೇಶಕ್ಕೆ ಕೀರ್ತಿ ತರಬೇಕೆಂದು ಹಾರೈಸಿದರು.
ಜಿಲ್ಲಾ ಅಮೆಚೂರು ಬಾಡಿ ಬಿಲ್ಡರ್ ಸಂಸ್ಥೆ ಜಿಲ್ಲಾಧ್ಯಕ್ಷ ಎ.ಎಂ.ಶರತ್‌ಚಂದ್ರ ಮಾತನಾಡಿ, ನಮ್ಮ ತಂದೆ ಅವರು ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದರು. ಯಾವುದೇ ತೀರ್ಮಾನ ಮೌಲ್ಯಾಧಾರಿತ ಆಗಿರಬೇಕು. ಯಾವ ಸಂದರ್ಭದಲ್ಲಿ ಏನೇ ಕಷ್ಟ ಬಂದರೂ ತಮ್ಮ ಮೌಲ್ಯ ಕಳೆದುಕೊಳ್ಳಬೇಡಿ. ಶಿಸ್ತು ಅನ್ನುವುದನ್ನು ಬೆಳೆಸಿಕೊಂಡರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ಯಾವುದೇ ಸಾಧನೆ ಮಾಡಬೇಕಾದರೆ ನಿಮ್ಮ ಮನಸ್ಸನ್ನು ಬೇರೆಡೆಗೆ ಹರಿಯ ಬಿಡಬೇಡಿ ಎಂದರು. ನಮ್ಮ ತಂದೆಯ ಒಡನಾಟ ಹೊಂದಿದ್ದ ನಿರಂಜನ್ ಅವರು ಹಲವು ವರ್ಷಗಳಿಂದ ಇಂದಿನವರೆಗೂ ತಮ್ಮ ಮೌಲ್ಯಗಳು, ಕ್ರೀಡಾ ಮನೋಭಾವ ಉಳಿಸಿಕೊಂಡು ಬಂದಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ವಿವಿಧ ಭಾಗಗಳಿಂದ ಬಂದಿದ್ದ ಕ್ರೀಡಾಪಟುಗಳು ಭಾಗವಹಿಸಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಜೂಡೋ ತರಬೇತುದಾರರಾದ ತ್ರಿವೇಣಿ, ಕ್ರೀಡಾ ಪರಿಷತ್ತು ಸದಸ್ಯೆ ಚಂದ್ರಮ್ಮ, ಚಂದ್ರೇಗೌಡ, ರಂಗಸ್ವಾಮಿ, ಕ್ರೀಡಾ ಪರಿಷತ್ ಕಾರ್ಯದರ್ಶಿ ನಿರಂಜನ್, ಜುಡೋ ಉಪಾಧ್ಯಕ್ಷ ಶಿವಾನಂದ್, ತೀರ್ಪುಗಾರರು ಪೂಜಾ, ಹೇಮಾಲತಾ, ರಾಜೇಶ್, ಮಹದೇವ್, ಪವರ್ ಲಿಪ್ಟಿಂಗ್ ಹನುಮಂತೇಗೌಡ, ಚಂದ್ರಕಲಾ, ಲೀಲಾವತಿ ಇದ್ದರು.  ಗ್ರೀಷ್ಮಾ, ಅನುಷಾ, ಪ್ರಣತಿ ಪ್ರಾರ್ಥಿಸಿದರೆ, ಭಾನುಮತಿ ನಿರೂಪಿಸಿದರು. ಪತ್ರಕರ್ತ ಬ್ಯಾಕರವಳ್ಳಿ ವೆಂಕಟೇಶ್ ಸ್ವಾಗತಿಸಿದರು.
Sports Council Secretary Niranjan and his team have been conducting sports. Judo is not very well known here. He said that such a competition is useful.