ಹಾಸನ: ನಗರದ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಾದ ಶಶಾಂಕ್ ಭಾರಧ್ವಾಜ್ ಹಾಗೂ ಅಭಿಷೇಕ್ . ಕೆ. ಎಸ್. ರವರು ಹಾಸನದ M C F ನಲ್ಲಿ ನಡೆದ ವಿಶ್ವ ಬಾಹ್ಯಾಕಾಶ ಸಪ್ತಾಹ 2023 ರ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನಗಳಿಸಿದ್ದಾರೆ.
ಇವರಿಗೆ ಕಾಲೇಜಿನ ಇ ,& ಸಿ. ವಿಭಾಗದ ಡಾ .ಡಿ. ಎಸ್. ಕೀರ್ತಿ ಸಹಾಯಕ ಪ್ರಾಧ್ಯಾಪಕರು ಮಾರ್ಗದರ್ಶಕ ರಾಗಿದ್ದರು.
ಇವರ ಯಶಸ್ವಿಗೆ. ಕಾಲೇಜಿನ ಆಡಳಿತ ಮಂಡಳಿ ಮತ್ತು ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಪ್ರದೀಪ್ ರವರು . ಹಾಗೂ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಸಿ. ಶ್ರೀಕಾಂತ್ ಶುಭ ಕೋರಿದ್ದಾರೆ.








