ಹಾಸನ: ಪತ್ರಕರ್ತರ ಬದುಕು-ಬವಣೆ ಮಾಹಿತಿ ಒಳಗೊಂಡ ಪ್ರಬಂಧ ಮಂಡಿಸಿದ ಡಾ.ಕೋಮಲ

ಹಾಸನ: ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಪತ್ರಕರ್ತರ Sociological Study of Socio-Economic Conditions of Hassan and Chikkamagaluru District Journalists ಸ್ಥಿತಿಗತಿ ಕುರಿತು ತಾವು ಅಧ್ಯಯನ ನಡೆಸಿ ಪ್ರಸ್ತುತ ಪಡಿಸಿದ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ದೊರೆತಿರುವುದಕ್ಕೆ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಜಿಲ್ಲಾ ಕೌಶಲ್ಯಾಭಿವೃದ್ಧಿ ವ್ಯವಸ್ಥಾಪಕಿ ಡಾ.ಕೋಮಲ ರಾಜಶೇಖರ್ ಹರ್ಷ ವ್ಯಕ್ತಪಡಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಅಧ್ಯಯನದಿಂದ ನನಗೆ ತುಂಬಾ ಅನುಕೂಲ ಮತ್ತು ಸಹಾಯ ಆಗಿದೆ ಎಂದರು. ನಾನು ಅಧ್ಯಯನ ಮಾಡಿದ ಪ್ರಕಾರ ಹೆಚ್ಚು ಪತ್ರಕರ್ತರು ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಾಗಿಲ್ಲ. ಇವರಿಗೆ ಸರ್ಕಾರ ಸೂಕ್ತ ಸವಲತ್ತು ಕೊಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ತಾವು ಪಿಹೆಚ್‌ಡಿ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ಇದೇ ವೇಳೆ ಡಾ.ಕೋಮಲಾ ಅವರನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್.ವೇಣುಕುಮಾರ್ ಅಭಿನಂದಿಸಿದರು.