Hassan: ಪೆನ್ ಡ್ರೈವ್ ಹಂಚಿಕೆ-📰 SIT ತನಿಖೆಯಲ್ಲಿ ಯಾರೂ ಮೂಗು ತೂರಿಸಿಲ್ಲ: ಶ್ರೇಯಸ್ ಪಟೇಲ್ ಸ್ಪಷ್ಟನೆ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಯಾರೂ ಮೂಗು ತೂರಿಸಿಲ್ಲ ಎಂದು ಸಂಸದ ಶ್ರೇಯಸ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ.

Hassanಹಾಸನ | ಕನ್ನಡಪೋಸ್ಟ್ ವರದಿ

ಹಾಸನದಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿನ SIT ದೋಷಾರೋಪ ಪಟ್ಟಿ ತಯಾರಿಯಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ನಡೆದಿದೆ ಎಂಬ ಶಾಸಕ ಸ್ವರೂಪ್ ಪ್ರಕಾಶ್ ಆರೋಪಗಳ  ಕುರಿತು ಸ್ಪಷ್ಟನೆ ನೀಡಿದ್ದು, ತನಿಖೆಯಲ್ಲಿ ಯಾರೂ ಮೂಗು ತೂರಿಸಿಲ್ಲ ಎಂದರು.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ವೈರಲ್ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯ ಕುರಿತು ಮಾತನಾಡಿದ ಅವರು,
ಎಸ್ಐಟಿ ತನಿಖೆಗೆ ಯಾರೂ ಮೂಗು ತೂರಿಸಿಲ್ಲ. ಈಗ ತನಿಖೆ ಪೂರ್ಣಗೊಂಡಿದ್ದು, ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತದೆ” ಎಂದು ಹೇಳಿದರು.


“ಅನುಮಾನ ಇದ್ದರೆ ಮೇಲ್ಮನವಿ ಹೋಗಲಿ”

“ಯಾರಿಗಾದರೂ ತನಿಖೆ ಬಗ್ಗೆ ಅನುಮಾನ ಇದ್ದರೆ ಮೇಲ್ಮನವಿ ಸಲ್ಲಿಸಬಹುದು. ಕಾನೂನು ಪ್ರಕ್ರಿಯೆ ಮುಂದುವರೆಯಲಿದೆ” ಎಂದು ಹೇಳಿದರು.


“ಎಸ್ಐಟಿ ಪಕ್ಷಪಾತದಿಂದ ರಚನೆಯಾಗಿಲ್ಲ”

ಜೆಡಿಎಸ್ ಪಕ್ಷದಿಂದ ಬಂದಿರುವ ಆರೋಪಗಳಿಗೆ ತಿರುಗೇಟು ನೀಡಿದ ಅವರು,
“ಎಸ್ಐಟಿಯನ್ನು ಯಾವ ಪಕ್ಷದ ಪರವಾಗಿ ಮಾಡಲು ರಚನೆ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.


“ನಾವು ತನಿಖೆಯಲ್ಲಿ ಮೂಗು ತೂರಿಸುವ ಅಗತ್ಯ ಇಲ್ಲ”

“ಪ್ರಭಾವಿ ಮುಖಂಡರ ಹಿಂಬಾಲಕರನ್ನು ಕೈಬಿಟ್ಟಿದ್ದಾರೆ ಎಂಬ ಆರೋಪ ಸರಿಯಲ್ಲ. ನಾವು ಎಸ್ಐಟಿ ತನಿಖೆಯಲ್ಲಿ ಮೂಗು ತೂರಿಸುವ ಅಗತ್ಯವೇ ಇಲ್ಲ” ಎಂದು ಶ್ರೇಯಸ್ ಪಟೇಲ್ ಹೇಳಿದರು.