ಬೇಲೂರು: ದೇಶದಲ್ಲಿ ಪ್ರಜಾಪ್ರಭುತ್ವ ಅಸ್ಥಿರತೆ ಕಾಣುತ್ತಿದೆ. ಮತದಾರರಿಗೆ ನೋಟು ಕೊಟ್ಟು ಓಟು ಖರೀದಿ ಮಾಡಿ ಗೆದ್ದ ಎಂಪಿ, ಎಂಎಲ್‌ಎ ಗಳಿಂದ ರಚನೆಯಾದ ಸರ್ಕಾರಗಳು, ಜನಪರ ಆಡಳಿತ ನೀಡುತ್ತಿಲ್ಲ. ತಾವು ಖರ್ಚು ಮಾಡಿದ ಹಣ ಸಂಪಾದಿಸಲು ವ್ಯಾಪಾರಿಗಳಾಗುತ್ತಾರೆಯೇ ವಿನಃ ಜನಸೇವಕರಾಗಲು ಸಾಧ್ಯವಿಲ್ಲ ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಕ್ಷೇತ್ರ ಸಮಿತಿಯಿಂದ ಬಿಕ್ಕೋಡು ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಸಹಯೋಗ ದಿವಸ್ ಆಂದೋಲನದಲ್ಲಿ ಭಾಗಿಯಾಗಿ ಮಾತನಾಡಿದವರು.
ಸ್ವತಂತ್ರ ಬಂದಾಗಿನಿಂದಲೂ ಮನುವಾದಿ ಪಕ್ಷಗಳು ಜನಸಾಮಾನ್ಯರ ಮೂಲಭೂತ ಸಮಸ್ಯೆ ಬಗ್ಗೆ ಗಮನಹರಿಸದೆ, ಅಪಾರ ಹಣ ವ್ಯಯ ಮಾಡಿ ಚುನಾವಣೆಗಳಲ್ಲಿ ಗೆದ್ದು ಬರುತ್ತಾರೆ.
ಜನರ ಹಿತಾಸಕ್ತಿ ನಿರ್ಲಕ್ಷಿಸಿದ್ದಾರೆ. ಮನುವಾದಿ ಪಕ್ಷಗಳು ಬಂಡವಾಳ ಶಾಹಿಗಳಿಂದ ಸಾವಿರಾರು ಕೋಟಿ ದೇಣಿಗೆ ಪಡೆದು, ಅದನ್ನು ಹಂಚಿ ಅಧಿಕಾರ ಹಿಡಿದ ಕಾಂಗ್ರೆಸ್-ಬಿಜೆಪಿ, ಬಂಡವಾಳ ಶಾಹಿಗಳ ಪರವಾದ ನೀತಿ ನಿಯಮ ರೂಪಿಸುತ್ತಾರೆ. ಬಂಡವಾಳಶಾಹಿಗಳಿಗೆ ಪೂರಕ ಬಜೆಟ್ ಮಂಡಿಸುತ್ತಾರೆ ಎಂದು ಆರೋಪಿಸಿದರು.
ಆದ್ದರಿಂದ ಬಹುಜನ ಸಮಾಜ ಪಾರ್ಟಿ, ತನ್ನ ಚುನಾವಣೆ ಖರ್ಚನ್ನು ಯಾವುದೇ ಬಂಡವಾಳ ಶಾಹಿಗಳಿಂದ ಪಡೆಯದೇ ಜನಸಾಮಾನ್ಯರಿಂದಲೇ ಆಂದೋಲನದ ಮೂಲಕ ಸಂಗ್ರಹಿಸಿ, ಚುನಾವಣೆ ನಡೆಸಿ ಜನಪರ ಆಡಳಿತ ನಡೆಸುವ ಮಹತ್ತರ ಉದ್ದೇಶ ಹೊಂದಿರುವ ಏಕೈಕ ಪಕ್ಷವಾಗಿದೆ.
ಈ ಪ್ರಯೋಗವನ್ನು ಮಾನ್ಯವಾರ್ ಕಾನ್ಶಾರಾಂಜೀ ಮತ್ತು ಮಾಯಾವತಿಯವರು ಉತ್ತರ ಪ್ರದೇಶದಲ್ಲಿ ಕೈಗೊಂಡು ಯಶಸ್ವಿಯಾಗಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಬಿಎಸ್ಪಿ ಉಸ್ತುವಾರಿಗಳಾಗಿ ದೆಹಲಿಯಿಂದ ಆಗಮಿಸಿದ್ದ ದಿನೇಶ್ ಗೌತಮ್ ಜೀ ಯವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಾನ್ಯವಾರ್ ಕಾನ್ಶಿರಾಂ ಜಿ ಅವರ ಕನಸನ್ನು ನನಸು ಮಾಡುವ ಸಲುವಾಗಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಉತ್ತರಪ್ರದೇಶದ ಮಾದರಿಯಲ್ಲಿ ಪಕ್ಷವನ್ನು ಸಂಘಟನೆ ಮಾಡಿ ಅಧಿಕಾರಕ್ಕೆ ತರುವ ಸಲುವಾಗಿ ಕಳೆದ ಎರಡು ಮೂರು ದಶಕಗಳಿಂದ ಕರ್ನಾಟಕ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟುತ್ತಿರುವ ಗಂಗಾಧರ್ ಬಹುಜನ್ ರವರನ್ನು ಈ ಬಾರಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಿಸಲು ತನು ಮನ ಧನ ಸಹಾಯ ನೀಡುವ ಮೂಲಕ ಕೈಜೋಡಿಸಬೇಕೆಂದು ಕರೆ ನೀಡಿದರು.
ಈ ವೇಳೆ ವಿವಿಧ ಗ್ರಾಮಗಳಿಗೆ ದೇಣಿಗೆ ಸಂಗ್ರಹಿಸಿದರು ಈ ಆಂದೋಲನದಲ್ಲಿ ರಾಜು ಬೆಳ್ಳೊಟ್ಟೆ, ಕಿರಣ್ ಕುಮಾರ್, ಹೇಮಂತ್ ನಿಟ್ಟೂರು, ಹೊಳೆನರಸೀಪುರದ ರವಿಕುಮಾರ್, ವಕೀಲ ರಾಜೇಶ್, ಉಮೇಶ್, ಪ್ರಕಾಶ್ ಕೆಸಗೋಡ್, ಮಂಜುನಾಥ್, ನಿಂಗರಾಜು, ಜಯಲಕ್ಷ್ಮಿ ಕಚೇರಿ ಕಾರ್ಯದರ್ಶಿ ಶ್ರೀನಾಥ್, ಮನು, ಬಿಕ್ಕೋಡು, ಮಲ್ಲೇಶ್, ಪುಟ್ಟಸ್ವಾಮಿ, ದ್ಯಾವಪ್ಪಣ್ಣ ಸಾಲಾವರ, ನಾಗೇಂದ್ರ ಗಂಗಾವರ, ಶಿವಪ್ಪ, ಹೊನ್ನಯ್ಯ ಕೇಶವ ಸಾಣೆನಹಳ್ಳಿ , ಮೂರ್ತಿ ಕೂಡ್ಲೂರು, ರುದ್ರೇಶ್ ಇಂಟಿತೊಳಲು, ನಿರಂಜನ್ ಸುನೀಲ್ ಕೌರಿ ಮುಂತಾದವರು ಭಾಗಿಯಾಗಿದ್ದರು.
Since independence, humanist parties have been winning elections by spending huge amounts of money, without paying attention to the fundamental problems of the common people.










