ಹಿರಿಯ ಪತ್ರಕರ್ತ ಕೆ.ಜಿ.ಸುರೇಶ್ ಸೇರಿ ಹಾಸನ ಜಿಲ್ಲೆಯ ಐವರು ಕನ್ನಡ ಜಾಗೃತ ಸಮಿತಿ ಸದಸ್ಯರಾಗಿ ನೇಮಕ

Senior journalist K.G. Suresh, along with five others from Hassan district, appointed as members of the Kannada Jagruta Samiti

ಹಾಸನ: ಕನ್ನಡಾಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿಗೆ ಹಾಸನ ಜಿಲ್ಲೆಯ ಐವರು ಸದಸ್ಯರ ನೇಮಕವಾಗಿದೆ.

ನೇಮಕಗೊಂಡವರು:

  • ಎ.ಆರ್. ಸುದರ್ಶನ್ ಬಾಬು – ಹೋಳೆನರಸಿಪುರ
  • ಶ್ರೀಮತಿ ರತಿ – ಹಾಸನ
  • ಕೆ.ಜಿ. ಸುರೇಶ್ – ಹಾಸನ
  • ರಾಮಚಂದ್ರಕುಮಾರ್ ಕೆ – ಹಾಸನ
  • ಆರ್.ಬಿ. ಪುಟ್ಟೇಗೌಡ – ಹೋಳೆನರಸಿಪುರ

ಮೈಸೂರು ವಿವಿಯಿಂದ ಕನ್ನಡ ಎಂ.ಎ.‌ ಸ್ನಾನಕೋತ್ತರ ಪದವಿ ಪಡೆದಿರುವ ಕೆ.ಜಿ.ಸುರೇಶ್ ಅವರು ಎರಡೂವರೆ ದಶಕಗಳಿಂದ ಕನ್ನಡ ಪತ್ರಿಕೋದ್ಯಮದ ಸೇವೆಯಲ್ಲಿ ತೊಡಗಿಕೊಂಡಿದ್ದು ನಾಡಿನ ಹಲವು ಪತ್ರಿಕೆ, ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ಹಾಸನ ವಿಜಯ ಸಂಜೆ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕವಿಯಾಗಿಯೂ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.