Mysuru: ಮೈಸೂರು ಸಿಲ್ಕ್ ಉಳಿಸಿ: ‘Save Mysore Silk’ ಅಭಿಯಾನ ಆರಂಭಿಸುತ್ತೇವೆ – ಆರ್.ಅಶೋಕ್

Save Mysore Silk Campaign: R Ashoka Slams Karnataka Government

ಮೈಸೂರು, ಫೆಬ್ರವರಿ,27,2026(www.kannadapost.com): ಮೈಸೂರು ಸಿಲ್ಕ್ ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪದ ನಡುವೆ ವಿಪಕ್ಷ ನಾಯಕ R. Ashoka ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮೈಸೂರು ಸಿಲ್ಕ್‌ಗೆ ಬೇಡಿಕೆಯೂ ಇದೆ, ಲಾಭವೂ ಇದೆ, ಸಂಸ್ಥೆಯೂ ಇದೆ. ಹಾಗಿದ್ದಾಗ ಅದನ್ನು ಮುಚ್ಚಲು ಯಾಕೆ ಪ್ರಯತ್ನ?” ಎಂದು ಪ್ರಶ್ನಿಸಿದ ಅವರು ‘Save Mysore Silk’ ಅಭಿಯಾನ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಮೈಸೂರು ಸಿಲ್ಕ್ – ರಾಜ್ಯದ ಹೆಮ್ಮೆ

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ಮೈಸೂರು ಸಿಲ್ಕ್ ಮತ್ತು ಹಾಲು ಉತ್ಪಾದನಾ ಕ್ಷೇತ್ರಗಳು ರಾಜ್ಯದ ಪ್ರಮುಖ ಬ್ರ್ಯಾಂಡ್‌ಗಳು ಎಂದು ಹೇಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ 112 ವರ್ಷಗಳ ಹಿಂದೆ ಈ ಸಂಸ್ಥೆ ಸ್ಥಾಪನೆಯಾಯಿತು ಎಂದು ಅವರು ನೆನಪಿಸಿದರು.

ರೈತರಿಗೆ ನೆರವಾಗಬೇಕು, ಉದ್ಯೋಗ ಸೃಷ್ಟಿಯಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಆರಂಭಗೊಂಡಿತ್ತು ಎಂದು ಹೇಳಿದರು. ಚನ್ನಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಮೈಸೂರು ಸಿಲ್ಕ್ ಸೀರೆಗಳು ತಯಾರಾಗುತ್ತವೆ ಮತ್ತು ಅವುಗಳಿಗೆ ಭಾರೀ ಬೇಡಿಕೆ ಇದೆ ಎಂದು ವಿವರಿಸಿದರು.


ಬೇಡಿಕೆಯಿರುವ ಸಂಸ್ಥೆ ಮುಚ್ಚುವುದು ಯಾಕೆ?

ಮೈಸೂರು ಸಿಲ್ಕ್ ಸೀರೆಗಳಿಗೆ ದೇಶದಾದ್ಯಂತ ಬೇಡಿಕೆ ಇದೆ. ಮದುವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಸೀರೆಗಳನ್ನು ವಿಶೇಷವಾಗಿ ಬಳಸಲಾಗುತ್ತದೆ. ಚಾಮುಂಡೇಶ್ವರಿ ದೇವಿಗೆ ಮೈಸೂರು ಸಿಲ್ಕ್ ಸೀರೆ ಉಡುಗೆಯಾಗಿ ಅರ್ಪಿಸುವ ಸಂಪ್ರದಾಯವೂ ಇದೆ ಎಂದು ಅವರು ಹೇಳಿದರು.

ಈ ಸಂಸ್ಥೆಯಿಂದ ಸುಮಾರು 96 ಕೋಟಿ ರೂಪಾಯಿ ಲಾಭ ಬಂದಿದೆ ಎಂದು ಆರ್.ಅಶೋಕ್ ಹೇಳಿದರು. ಹಾಗಿದ್ದರೂ ಕಾರ್ಖಾನೆ ಮುಚ್ಚಲು ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.


ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ

ಕಾರ್ಖಾನೆ ಇರುವ ಜಾಗದಲ್ಲೇ ಕ್ರೀಡಾಂಗಣ ನಿರ್ಮಿಸಲು ಯತ್ನ ನಡೆಯುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. “ಕ್ರೀಡಾಂಗಣ ಮಾಡಲು ಬೇರೆ ಜಾಗ ಇಲ್ಲವೇ? ದೇವರು ಹೇಳಿದಂತೆ ಇದೇ ಜಾಗ ಬೇಕಾ?” ಎಂದು ಪ್ರಶ್ನಿಸಿದರು.

ಕಾರ್ಖಾನೆಯಿಂದ ವಾಸನೆ ಬರುತ್ತದೆ ಎಂಬ ಕಾರಣ ಹೇಳಲಾಗುತ್ತಿದೆ. ಆದರೆ ಅದರ ನಿವಾರಣೆಗೆ ಸಾವಿರಾರು ಮರಗಳನ್ನು ನೆಡಲಾಗಿದೆ ಎಂದು ಅವರು ಹೇಳಿದರು. ಒಂದು ಕಡೆ ಮರಗಳನ್ನು ಕಡಿದು ಮತ್ತೊಂದು ಕಡೆ ಕಾರ್ಖಾನೆ ಮುಚ್ಚುವುದು ಸರಿಯಲ್ಲ ಎಂದು ಸರ್ಕಾರವನ್ನು ಟೀಕಿಸಿದರು.


ಭ್ರಷ್ಟಾಚಾರದ ಆರೋಪ

ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿರುವ ಆರ್.ಅಶೋಕ್, ಕ್ರೀಡಾಂಗಣ ನಿರ್ಮಾಣದ ಹಿಂದೆ ಭ್ರಷ್ಟಾಚಾರ ಇದೆ ಎಂದು ಹೇಳಿದರು. “12 ಕೋಟಿ ರೂಪಾಯಿ ಟೆಂಡರ್ ಸ್ಯಾಂಕ್ಷನ್ ಆಗಿದೆ. ಅದರಲ್ಲಿ ಕಮಿಷನ್ ರಾಜಕಾರಣ ನಡೆಯುತ್ತಿದೆ” ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕನೊಬ್ಬರ ಮಿಲ್‌ಗೆ ಸಿಲ್ಕ್ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಅವರು ಆರೋಪಿಸಿದರು.


ಮೈಸೂರು ಸ್ಯಾಂಡಲ್ ಸೋಪ್ ವಿವಾದ

ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ ಬಾಲಿವುಡ್ ನಟಿ Tamannaah Bhatia ಅವರನ್ನು ರಾಯಭಾರಿಯಾಗಿ ನೇಮಿಸಿರುವುದನ್ನೂ ಆರ್.ಅಶೋಕ್ ಪ್ರಶ್ನಿಸಿದರು.

ಕನ್ನಡದ ಕಲಾವಿದರನ್ನು ಬಳಸದೆ ಹೊರರಾಜ್ಯದ ನಟಿಗೆ ಎರಡು ಕೋಟಿ ರೂಪಾಯಿ ನೀಡುವುದು ಸರಿಯಲ್ಲ ಎಂದು ಅವರು ಹೇಳಿದರು. ಕನ್ನಡದ ನಟಿಯರು ಅಥವಾ ನಟರನ್ನು ಬಳಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.


ಉದ್ಯೋಗ ಕುರಿತು ಹೋರಾಟ

ಸರ್ಕಾರಿ ಉದ್ಯೋಗಗಳ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು. 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಸರ್ಕಾರ 50 ಸಾವಿರ ಹುದ್ದೆಗಳ ನೇಮಕಾತಿ ಘೋಷಿಸಿದ ಹಿನ್ನೆಲೆ ತಾತ್ಕಾಲಿಕವಾಗಿ ಅದನ್ನು ಕೈಬಿಟ್ಟಿದ್ದೇವೆ ಎಂದು ಹೇಳಿದರು.

Save Mysore Silk Campaign: R Ashoka Slams Karnataka Government

Mysuru, February 27, 2026: Opposition leader R. Ashoka has strongly criticised the Karnataka government over the alleged move to shut down the historic Mysore Silk unit.

He warned that a “Save Mysore Silk campaign” would be launched if the government proceeds with the plan.


Historic Brand of Karnataka

Speaking to reporters in Mysuru, Ashoka said Mysore Silk and milk industries are iconic brands of Karnataka.

The Mysore Silk unit was established more than 112 years ago under the vision of the Mysore Maharaja. The initiative aimed to support farmers and generate employment.

According to him, thousands of people depend on the industry for their livelihood.


Strong Demand for Mysore Silk

Ashoka stated that Mysore Silk sarees have strong demand across the country.

The sarees are traditionally used during weddings and religious ceremonies. Devotees also offer Mysore Silk sarees to Goddess Chamundeshwari, he added.

He claimed the silk unit generated profits worth nearly ₹96 crore, questioning why such a profitable institution should be shut down.


Stadium Construction Controversy

The opposition leader also alleged that the government is trying to construct a stadium at the same location where the factory operates.

He questioned why alternative land cannot be identified for the stadium project.

Ashoka further alleged corruption behind the project and demanded transparency from the government.