ಸಕಲೇಶಪುರ: ಅಕ್ರಮ ಸಾಗಣೆ-ಒಂದು ಲೋಡ್ ಮರದ ನಾಟ ವಶಪಡಿಸಿಕೊಂಡ ಅರಣ್ಯ ಇಲಾಖೆ

Sakleshpur: A load of illegally transported tree saplings was seized in a raid conducted by Forest Department officials.

ಸಕಲೇಶಪುರ: ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ  ಒಂದು ಲೋಡ್‌ ಮರದ ನಾಟ ವಶಪಡಿಸಿಕೊಳ್ಳಲಾಗಿದೆ.

DFO ಸೌರಭ್ ಕುಮಾರ್ ಹಾಗೂ ACF ಮಧುಸೂದನ್ ಅವರ ಮಾರ್ಗದರ್ಶನದಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ಮಹದೇವ್, ಅರ್ಜುನ್, ಮಂಜುನಾಥ್ ಹಾಗೂ ಗಸ್ತು ಅರಣ್ಯ ಪಾಲಕರಾದ ಯೋಗೇಶ್, ದೇವರಾಜ್, ಜಯಸ್ವಾಮಿ ಮತ್ತು ಅರಣ್ಯ ವೀಕ್ಷಕ ಲೋಕೇಶ್ ಸೇರಿ ತಂಡ ದಾಳಿ ನಡೆಸಿತು.

ಈ ವೇಳೆ ವಾಹನ ಸಂಖ್ಯೆ KA-14 B 3463 ಯಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಂದು ಲೋಡ್ ಬಿಲೆಟ್ಸ್‌ ಅನ್ನು ಕುಪ್ಪಳ್ಳಿ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಯಿತು.

ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ.