ರಶ್ಮಿಕಾ ಅಭಿನಯದ ಮೈಸಾ ಚಿತ್ರದ ಜಗತ್ತಿನ ರೋಮಾಂಚಕಾರಿ ಝಲಕ್ ರಿಲೀಸ್‌-ರಾ ಅಂಡ್‌ ರಗಡ್‌ ಲುಕ್‌ ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌

Rashmika Mandanna in a fierce avatar saying "Maisa - Remember the Name". Rashmika's gift for the release of the first glimpse of the movie "Maisa" at the end of the year

“ಮೈಸಾ – ರಿಮೆಂಬರ್ ದಿ ನೇಮ್” ಎನ್ನುತ್ತಾ ಉಗ್ರ ಅವತಾರ ತಾಳಿದ ರಶ್ಮೀಕಾ ಮಂದಣ್ಣ. ಮೈಸಾ ಸಿನಿಮಾದ ಮೊದಲ ಗ್ಲಿಮ್ಸ್‌ ರಿಲೀಸ್‌ ಇಯರ್‌ ಎಂಟ್‌ ಗೆ ರಶ್ಮಿಕಾ ಕಡೆಯಿಂದ ಗಿಫ್ಟ್‌

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಮೈಸಾ ಸಿನಿಮಾ ಫಸ್ಟ್‌ ಗ್ಲಿಮ್ಸ್‌ ರಿಲೀಸ್‌ ಆಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ಲುಕ್‌ ನಲ್ಲಿ ನಟಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟೈಟಲ್‌ ಹಾಗೂ ಫಸ್ಟ್‌ ಲುಕ್‌ ನಿಂದಲೂ ಸದ್ದು ಮಾಡಿದ್ದ ಮೈಸಾ ಸಿನಿಮಾ ವರ್ಷಾಂತ್ಯದಲ್ಲಿ ಗ್ಲಿಮ್ಸ್‌ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಮೈಸಾ ಸಿನಿಮಾದಿಂದ ರವೀಂದ್ರ ಪುಲ್ಲೆ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದ್ದಾರೆ. ಅನ್‌ಫಾರ್ಮ್ಯುಲಾ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಪ್ಯಾನ್–ಇಂಡಿಯಾ ಚಿತ್ರ ಭಾರೀ ಬಜೆಟ್‌ನಲ್ಲಿ ಮೂಡಿಬರುತ್ತಿದೆ. ಸದ್ಯ ಬಿಡುಗಡೆ ಆಗಿರೋ ಗ್ಲಿಮ್ಸ್‌ ನಲ್ಲಿ ರಶ್ಮಿಕಾ ಲುಕ್‌ ನೋಡ್ತಿದ್ರೆ. ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚು ಮಾಡ್ತಿದೆ.

ಇಷ್ಟು ದಿನಗಳ ಕಾಲ ಕಮರ್ಷಿಯಲ್‌ ಸಿನಿಮಾಗಳಲ್ಲಿ ಅಭಿನಯ ಮಾಡಿ ಸೈ ಎನ್ನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ ರಶ್ಮಿಕಾ. ಗ್ಲಿಮ್ಸ್‌ ನಲ್ಲಿ ನಾಯಕಿಯ ತಾಯಿ ಹೇಳುವ ಶಕ್ತಿಶಾಲಿ ವಾಯ್ಸ್ ಓವರ್‌ನೊಂದಿಗೆ ಆರಂಭವಾಗುತ್ತದೆ. ಅವಳ ಮಗಳು ಮರಣವನ್ನೇ ಎದುರಿಸಿ ನಿಲ್ಲುವ ಶಕ್ತಿ ಹೊಂದಿದ್ದಾಳೆ ಎಂದು ಹೇಳುತ್ತಾ, “ಈ ಹೆಸರನ್ನು ನೆನಪಿಟ್ಟುಕೊಳ್ಳಿ — ಮೈಸಾ” ಎಂದು ಲೋಕಕ್ಕೆ ಸಂದೇಶ ನೀಡುತ್ತಾರೆ.

ಮೈಸಾ Gondi ಸಮುದಾಯದ ಮಹಿಳಾ ನಾಯಕಿಯನ್ನು ಅತ್ಯಂತ ಬಲಿಷ್ಠ, ಉಗ್ರ ಮತ್ತು ಭಾವನಾತ್ಮಕವಾಗಿ ತೋರಿಸುವ ಮೊದಲ ಚಲನಚಿತ್ರವಾಗಿ ಗುರುತಿಸಿಕೊಳ್ಳುತ್ತಿದೆ. ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಚಿತ್ರದ ಛಾಯಾಗ್ರಾಹಕ ಶ್ರೀಯಾಸ್ ಪಿ ಕೃಷ್ಣ ಅವರ ಕೆಲಸ ಸಿನಿಮಾಗೆ ಮತ್ತಷ್ಟು ಫ್ಲಸ್‌ ಆಗಲಿದೆ.. ಜೇಕ್ಸ್ ಬೆಜೋಯ್ ರವರ ಸಂಗೀತ ಹಾಗೂ ಅಂತರರಾಷ್ಟ್ರೀಯ ಸ್ಟಂಟ್ ನಿರ್ದೇಶಕ ಆಂಡಿ ಲಾಂಗ್ ನೇತೃತ್ವದ ಆಕ್ಷನ್ ಸೀನ್‌ ಗಳು ಅದ್ಬುತವಾಗಿ ಮೂಡಿ ಬರ್ತಿದೆ.ಪ್ರಸ್ತುತ ತೆಲಂಗಾಣ ಮತ್ತು ಕೇರಳದ ಅರಣ್ಯ ಪ್ರದೇಶಗಳಲ್ಲಿ ಚಿತ್ರ ಶೂಟಿಂಗ್ ನಡೆಯುತ್ತಿದ್ದು, ಟೀಸರ್ ಬಿಡುಗಡೆಯಿಂದ ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಿದೆ. ಆ್ಯಕ್ಷನ್ ಪ್ರಧಾನ ಸಿನಿಮಾ ಆಗಿರುವುದರಿಂದ, ನಿರ್ಮಾಪಕರು ಯಾವುದೇ ವಿಚಾರಕ್ಕೂ ಕಾಂಪ್ರಮೈಸ್‌ ಆಗದೇ ಚಿತ್ರಕ್ಕೆ ಬೇಕಿರೋ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದಾರೆ…

ನಟರು: ರಶ್ಮಿಕಾ ಮಂದಣ್ಣ, ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್ ಹಾಗೂ ಇತರರು.

ತಾಂತ್ರಿಕ ತಂಡ:

Writer, Director: ರವೀಂದ್ರ ಪುಲ್ಲ

Producers: ಅನ್‌ಫಾರ್ಮ್ಯುಲಾ ಫಿಲ್ಮ್ಸ್

Music: ಜೇಕ್ಸ್ ಬೆಜೋಯ್
DoP: ಶ್ರೀಯಾಸ್ ಪಿ ಕೃಷ್ಣಾ
Stunts: ಆಂಡಿ ಲಾಂಗ್