ನಟ ಸುದೀಪ್‌ ಬಾವ ರಂಜಿತ್‌ ರಾಧಾಕೃಷ್ಣನ್‌ ಅವರ ‘ಅಂಶ’ ಕೃತಿ ಲೋಕಾರ್ಪಣೆ

ನಟ ಸುದೀಪ್‌ ಬಾವ ರಂಜಿತ್‌ ರಾಧಾಕೃಷ್ಣನ್‌ ಅವರ 'ಅಂಶ' ಕೃತಿ ಲೋಕಾರ್ಪಣೆ

ನಟ ಕಿಚ್ಚ ಸುದೀಪ್‌ ಅವರ ಬಾವ ರಂಜಿತ್‌ ರಾಧಾಕೃಷ್ಣನ್‌ ರಚನೆಯ ‘Blade of Fury’ ಕೃತಿಯ ಕನ್ನಡ ಅವತರಣಿಕೆ ‘ಅಂಶ – ಪರಶುರಾಮನ ಶೌರ್ಯಗಾಥೆ’ ನಿನ್ನೆ ರಾಜ್ಯೋತ್ಸವದಂದು ಬಿಡುಗಡೆಯಾಗಿದೆ. ‘ರೇಣುಕಾ ಜಮದಗ್ನಿ- ಪರಶುರಾಮರ ಕಥೆಯನ್ನು ಈ ನಾಡಿನಲ್ಲಿ ಕೇಳದವರು ಕಡಿಮೆ. ಪುರಾಣದ ಕಥೆಗಳು ಭಕ್ತಿಯ ದೃಷ್ಟಿಯಿಂದ ಪುನರ್ ಪಠಣವಾಗುವ ಅದರ ಜೊತೆಗೆ ಪುನರ್ಮನನ ಆಗುವುದು ಈ ನೆಲದ ಮಹಿಮೆ. ಈ ಕೃತಿಯಲ್ಲೂ ಅದನ್ನು ಸಾಧ್ಯವಾಗಿಸುವ ಪ್ರಯತ್ನ ನಡೆದಿದೆ’ ಎನ್ನುತ್ತಾರೆ ಕೃತಿಕಾರ ರಂಜಿತ್‌ ರಾಧಾಕೃಷ್ಣನ್‌. ಅವರ ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿರುವವರು ಅಮೂಲ್ಯ ಎಸ್‌ ಪ್ರಮೋದ್‌. ಕೃತಿಯ ಬಗ್ಗೆ ಮಾತನಾಡಿರುವ ನಟ ಸುದೀಪ್‌, ‘ಪದಪದವೂ ರೋಮಾಂಚಕ ಹಾಗೂ ಮಾಂತ್ರಿಕವೆನಿಸುವ ಕೌತುಕಮಯ, ಕುಶಾಲತೆಯ ನಿರೂಪಣೆ. ಅದ್ಭುತ ಕತೆ’ ಎಂದಿದ್ದಾರೆ. ಇದೇ ನವೆಂಬರ್‌ 20ರಿಂದ ಅಮೇಜಾನ್‌ನಲ್ಲಿ ಈ ಕೃತಿ ಲಭ್ಯವಾಗಲಿದೆ.