15.2 C
Munich
Home Uncategorized ಬೆಳ್ಳಿತೆರೆಗೆ ಸಜ್ಜಾದ ಸುಷ್ಮಿತಾ ಭಟ್ – ಕರಾವಳಿ ಸಿನಿಮಾದ ಹೊಸ ಮುಖ

ಬೆಳ್ಳಿತೆರೆಗೆ ಸಜ್ಜಾದ ಸುಷ್ಮಿತಾ ಭಟ್ – ಕರಾವಳಿ ಸಿನಿಮಾದ ಹೊಸ ಮುಖ

Raj B Shetty joined the Karavali Cinema team as Mahaveer, and now promising Kannada actress Sushmita Bhatt is acting alongside Raj B.

ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿ ಆಗ್ತಿರೋ ಕರಾವಳಿ ಸಿನಿಮಾ ತಂಡಕ್ಕೆ ಸದ್ಯ ಹೊಸ ಕಲಾವಿದೆಯ ಸೇರ್ಪಡೆ ಆಗಿದೆ. ಇತ್ತಿಚಿಗಷ್ಟೇ ಕರಾವಳಿ ಸಿನಿಮಾ ತಂಡಕ್ಕೆ ಮಹಾವೀರನಾಗಿ ರಾಜ್ ಬಿ ಶೆಟ್ಟಿ ಸೇರಿಕೊಂಡಿದ್ರು ಈಗ ರಾಜ್ ಬಿ ಜೊತೆಯಾಗಿ ಕನ್ನಡದ ಭರವಸೆಯ ನಟಿ ಸುಷ್ಮಿತಾ ಭಟ್ ಅಭಿನಯ ಮಾಡುತ್ತಿದ್ದಾರೆ. ಸುಷ್ಮಿತಾ ಭಟ್ ಈಗಾಗಲೇ ಎರಡು ಸಿನಿಮಾದಲ್ಲಿ ನಟಿಸಿದ್ದು ಕರಾವಳಿ ಅವರ ಮೂರನೇ ಸಿನಿಮಾ.

ಸೋಷಿಯಲ್ ಮಿಡಿಯಾದಲ್ಲಿ ಫೋಟೋ ಶೂಟ್ ಗಳ ಮೂಲಕವೇ ಸದ್ದು ಮಾಡ್ತಿದ್ದ ಸುಷ್ಮಿತಾ ಭಟ್ ಈಗ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ತಂಡ ಸುಷ್ಮಿತಾ ಅವರ ಪಾತ್ರದ ಪೊಸ್ಟರ್ ರಿಲೀಸ್ ಮಾಡಿದ್ದಾರೆ. ಪಕ್ಕ ಮಂಗಳೂರಿನ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಸುಷ್ಮಿತಾ ಕರಾವಳಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

ಕರಾವಳಿ ಚಿತ್ರತಂಡ ಸುಷ್ಮಿತಾ ಅವ್ರನ್ನ ಪಾತ್ರಕ್ಕಾಗಿ ಅಪ್ರೋಚ್ ಮಾಡಿದಾಗ ಸುಷ್ಮಿತಾ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಕರಾವಳಿ ಪಾತ್ರ ಒಪ್ಪಿಕೊಳ್ಳಲು ಮೊದಲ ಕಾರಣ ರಾಜ್ ಬಿ ಶೆಟ್ಟಿ ಅಂತಾರೆ ಸುಷ್ಮಿತಾ. ರಾಜ್ ಬಿ ಅವರಿಂದ ತುಂಬಾ ಕಲಿಯಬಹುದು ಅನ್ನೋ ಉದ್ದೇಶದಿಂದಲೇ ಈ ಸಿನಿಮಾ ಒಪ್ಪಿಕೊಂಡೆ ಚಿತ್ರೀಕರಣ ಮಾಡಿದ್ದು ಕಡಿಮೆ ದಿನಗಳು ಆದರೂ ಕೂಡ ಸಾಕಷ್ಟು ಕಲಿತಿದ್ದೇನೆ. ರಾಜ್ ಬಿ ಶೆಟ್ಟಿ ಪವರ್ ಹೌಸ್ ಇದ್ದಂಗೆ ಅವರಿಗೆ ಸಖತ್ ಎನರ್ಜಿ ಇದೆ ಸೆಟ್ ನಲ್ಲಿ ಯಾವಾಗಲೂ ಆಕ್ಟಿವ್ ಆಗಿರ್ತಾರೆ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ ಎಂದಿದ್ದಾದೆ.

ಇನ್ನು ಕರಾವಳಿ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಸಂಪದಾ ಹಾಗೂ ರಾಜ್ ಬಿ ಶೆಟ್ಟಿ ಸೇರಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಕಾಣಿಸಿಕೊಂಡಿದ್ದಾರೆ.

ಕರಾವಳಿ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಕ್ಯಾಮರ ವರ್ಕ್ ಚಿತ್ರಕ್ಕಿದೆ.

error: Content is protected !!