ಹಾಸನ: ನಗರದ ಆರ್.ಸಿ. ರಸ್ತೆ ಬಳಿ ಇರುವ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನ.29ಮತ್ತು 30 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಪರಿವಾರದ ವೇದ ಭಾರತೀ ಹಾಗೂ ನಿಕಟಪೂರ್ವ ಜಿಲ್ಲಾ ಸಂರಕ್ಷಕ ಹರಿಹರಪುರ ಶ್ರೀಧರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹುಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿರುವ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೋಗಿಗಳ ಬಹುಕಾಲದ ಬೇಡಿಕೆ ಪ್ರಕಾರ ರಾಜ್ಯದ ಹೆಸರಾಂತ ವೈದ್ಯ ಡಾ. ವೆಂಕಟರಮಣ ಹೆಗಡೆ ಅವರ ನೇತೃತ್ವದಲ್ಲಿ ತಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ದೀರ್ಘಕಾಲದ ಅನಾರೋಗ್ಯ, ಜೀವನಶೈಲಿ ಸಂಬಂಧಿತ ಕಾಯಿಲೆ ಹಾಗೂ ಜೀರ್ಣಕ್ರಿಯೆ ತೊಂದರೆಗಳಿಂದ ಬಳಲುತ್ತಿರುವ ಜನರಿಂದ ಬಂದ ನಿರಂತರ ಮನವಿ ಆಧಾರದ ಮೇಲೆ, ರಾಜ್ಯದ ಖ್ಯಾತ ವೈದ್ಯ ಹಾಗೂ ಆರೋಗ್ಯ ಜಾಗೃತಿ ಧೂತರಾದ ವೈದ್ಯ ಡಾ. ವೆಂಕಟರಮಣ ಹೆಗಡೆ ಅವರ ನೇತೃತ್ವದ ತಂಡ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಿದೆ ಎಂದರು.
ಎರಡು ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ರೋಗಿಗಳ ತಪಾಸಣೆ, ಸಲಹೆ, ಮಾರ್ಗದರ್ಶನ ನೀಡಲಾಗುತ್ತದೆ. ವೈದ್ಯರು ಸೂಚಿಸಿದ ಔಷಧಿಗಳನ್ನು ಶಿಬಿರ ಸ್ಥಳದಲ್ಲೇ ಖರೀದಿಸಬಹುದಾದ ವ್ಯವಸ್ಥೆ ಕೂಡ ರೂಪಿಸಲಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ತಪಾಸಣೆ ಪಡೆಯಲು ಆಸಕ್ತರು ಮುಂಚಿತವಾಗಿ ತಮ್ಮ ಭೇಟಿ ನಿಗದಿಪಡಿಸಿಕೊಳ್ಳುವುದು ಅಗತ್ಯ. ಹೆಚ್ಚಿನ ಮಾಹಿತಿಗಾಗಿ 8073320479, 8970822508 ಸಂಪರ್ಕಿಸಬಹುದಾಗಿದೆ ಎಂದು ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಯೋಗಾಪಟು ನಾಗರಾಜ್, ವೇದ ಭಾರತಿ ಕಾರ್ಯದರ್ಶಿ ನಟರಾಜ್, ನಿಸರ್ಗ ಸೆಂಟರ್‌ನ ಪ್ರವೀಣ್ ಇದ್ದರು.










