ಹಾಸನ: ವಿದ್ಯಾರ್ಥಿಗಳ ಸಮಯ ಹಾಳು ಮಾಡಬೇಡಿ, ಇಂದಿನ ಮಕ್ಕಳೇ ದೇಶದ ಭವಿಷ್ಯ – ಡಾ. ವಿಜಯಲಕ್ಷ್ಮಿ ದೇಶಮಾನೆ

Padma Shri awardee Dr. Vijayalakshmi Deshmane called on students not to waste their time, saying that today's children will rule the country in the future, so prepare for it right away

ಹಾಸನ: ವಿದ್ಯಾರ್ಥಿಗಳ ಸಮಯ ಹಾಳು ಮಾಡಬೇಡಿ, ಇಂದಿನ ಮಕ್ಕಳೇ ಮುಂದೆ ದೇಶ ಆಳೋದು, ಅದಕ್ಕಾಗಿ ಈಗಿನಿಂದಲೇ ಸನ್ನದ್ಧರಾಗಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ವಿಜಯಲಕ್ಷ್ಮಿ ದೇಶಮಾನೆ ಕರೆ ನೀಡಿದರು.

ನಗರದ ಎಂಜಿ ರಸ್ತೆಯ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜನಮಿತ್ರ ಪ್ರಾದೇಶಿಕ ಪತ್ರಿಕೆ ವತಿಯಿಂದ ಸತತ 2 ನೇ ಭಾರಿಗೆ ಆಯೋಜನೆ ಮಾಡಿರುವ 2 ದಿನಗಳ ಎಜುಕೇಶನ್ ಎಕ್ಸ್‌ಪೋವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇದರ ಲಾಭವನ್ನು ಮಕ್ಕಳು ಪಡೆಯಬೇಕು, ಇದು ಒಳ್ಳೆಯ ಕಾರ್ಯಕ್ರಮ, ಇದರಲ್ಲಿ ನಿಮ್ಮ ಭಾಗಿ ಅತಿಮುಖ್ಯವಾದುದು, ನಿಮ್ಮ ಕೆಲಸವನ್ನು ನೀವು ಸದಾ ಮಾಡಬೇಕು ಎಂದು ತಿಳಿ ಹೇಳಿದರು.

ನೀನು ಹೆಚ್ಚು ಹೆಚ್ಚು ಅಂಕ ಪಡೆಯಬೇಕು, ಅಂತೆಯೇ ಮಲ್ಟಿಪಲ್ ಚಾಯ್ಸ್, ನೆಗೆಟಿವ್ ಮಾರ್ಕ್ಸ್ ಇದೆ ಎಂಬ ಎಚ್ಚರ ನಿಮಗಿರಬೇಕು ಎಂದರು.

ಇಂದು ಕಂಪ್ಯೂಟರ್ ಜ್ಞಾನದ ಜೊತೆಗೆ ಎಐ ತಂತ್ರಜ್ಞಾನ ಎದುರಿಸಲು ನೀನು ಸಿದ್ಧರಿರಬೇಕು. ವಿಶ್ವದಲ್ಲೇ ನಮ್ಮದು ಪ್ರಜಾಪ್ರಭುತ್ವ, ಅದಕ್ಕೆ ಗೌರವ ಸಿಗಬೇಕು ಎಂದರು.ಜನಮಿತ್ರ ಪತ್ರಿಕೆ ಕೇವಲ ಸುದ್ದಿಗೆ ಸೀಮಿತ ಆಗಿಲ್ಲ. ಎಲ್ಲ ವಿದ್ಯಾಮಾನಗಳ ಬಗ್ಗೆ ಮಹತ್ವ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾತಿನ ಮಧ್ಯೆ ತಾವು ಬಡಕುಟುಂಬದಿಂದ ನಡೆದು ಬಂದ ಹಾದಿಯನ್ನು ನೆನೆದ ಅವರು, ನಮ್ಮ ತಂದೆ-ತಾಯಿ ಅನಕ್ಷರಸ್ಥರಾಗಿ ನಮ್ಮನ್ನು ಈ ಹಂತಕ್ಕೆ ಬೆಳೆಸಿದ್ದಾರೆ. ಈಗಿನ ಮಕ್ಕಳಿಗೆ ಎಲ್ಲ ಸಿಗುತ್ತಿದೆ ಎಂದರು.

ಮಕ್ಕಳು ಎಚ್ಚರ ಮರೆಯಬಾರದು, ಎಲ್ಲದಕ್ಕೂ ಬ್ಯಾಲೆನ್ಸ್ ಆಗಿ ಇರಬೇಡಿ. ಮೊಬೈಲ್ ಬಳಕೆ ಕಡಿಮೆ ಮಾಡಿ.

ದೇಶದ ಇಂದು ಜಗತ್ತಿನ ನಾಲ್ಕನೇ ಎಕಾನಮಿ ರಾಷ್ಟ್ರವಾಗಿದೆ. ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ನಂ-1 ಆಗಬೇಕು ಎಂದು ಆಶಿಸಿದರು.

ಇದೇ ವೇಳೆ ಮಕ್ಕಳು ಕಡಿಮೆ ಮಾತಾಡಿ, ಹೆಚ್ಚು ಸಾಧಿಸಿ ಎಂದ ಅವರು, ತಮ್ಮ ಕುಟುಂಬ ಕುರಿತು ಆಗಿರುವ ಮಾತಂಗಿ ದೀವಟಿಗೆ ಚಲನ ಚಿತ್ರವನ್ನು ಎಲ್ಲರಿಗೂ ತೋರಿಸುವಂತೆ ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಮಾತನಾಡಿ, ಜನಮಿತ್ರ ಕೇವಲ ಪತ್ರಿಕೆಯಾಗಿ ಅಷ್ಟೇ ಅಲ್ಲ ಶೈಕ್ಷಣಿಕ ವಾತಾವರಣದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಒಂದೇ ಸೂರಿನಡಿ ಶಿಕ್ಷಣ ಸಂಸ್ಥೆಗಳನ್ನೂ ಒಗ್ಗೂಡಿಸಿ ಅವುಗಳ ಸೌಲಭ್ಯವನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಈ ಕುರಿತು ಆರೋಚನೆ ಮಾಡಿರುವ ನವೀನ್ ಹಾಗ ಭವ್ಯ ದಂಪತಿಗೆ ಅಭಿನಂದನೆ ಹೇಳಿದರು.

ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಿವರಾಮೇಗೌಡ ಮಾತನಾಡಿ, ವಿಜಯಲಕ್ಷ್ಮಿ ದೇಶಮಾನೆ ಅವರಂಥವರನ್ನು ಎದುರುಗೊಂಡಿರುವ ಮಕ್ಕಳು ನಿಜಕ್ಕೂ ಭಾಗ್ಯಶಾಲಿ ಎಂದರು.

ಅವರೊಬ್ಬ ದಿವ್ಯ ಚೇತನ, ಇಂಥ ಮೇರು ವ್ಯಕ್ತಿತ್ವದವರನ್ನು ಇವತ್ತಿನ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿರುವ ಸಿ.ಆರ್.ನವೀನ್ ದಂಪತಿಯನ್ನು ಅಭಿನಂದಿಸಿದರು. ಹಾಸನ ಭಾಗದಲ್ಲಿ ವಿದ್ಯಾವಂತರು ಜಾಸ್ತಿ ಎಂದು ದೇಶಮಾನೆ ಮೇಡಂ ಹೇಳುತ್ತಿದ್ದರು. ಆದರೆ ಅವರ ಕಡೆಯೂ ಹೆಚ್ಚಿದ್ದಾರೆ ಎಂಬುದಕ್ಕೆ ಅವರು ಬಡತನದಲ್ಲಿ ಹುಟ್ಟಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವುದು ಆ ಭಾಗದಲ್ಲೂ ಹೆಚ್ಚು ಸುಶಿಕ್ಷಿತರಿದ್ದಾರೆ ಎಂಬುದನ್ನು ಸಾಕ್ಷಿ ಎಂದರು.

ಬಡತನದಲ್ಲಿ ಹುಟ್ಟಿದರೂ ಅತ್ಯುನ್ನತ ಪದ್ಮಶ್ರಿ ಪಡೆಯಲು ಸಾಧ್ಯವಿದೆ ಎಂಬುದನ್ನು ವಿಜಯಲಕ್ಷ್ಮಿ ಅವರು ತೋರಿಸಿಕೊಟ್ಟಿದ್ದಾರೆ. ಅವರಂತೆಯೇ ಮಕ್ಕಳೂ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಜನಮಿತ್ರ ಪ್ರಾದೇಶಿಕ
ಪತ್ರಿಕೆ ಪ್ರಧಾನ ಸಂಪಾದಕ ಹೆಚ್.ಬಿ. ಮದನಗೌಡ, ಶೈಕ್ಷಣಿಕ ಎಕ್ಸ್‌ಪೋ ಎರಡನೇ ವರ್ಷದ ಪ್ರಯತ್ನ. ಶೈಕ್ಷಣಿಕವಾಗಿ ಮಕ್ಕಳು, ಪೋಷಕರಿಗೆ ತಿಳುವಳಿಕೆ ನೀಡುವ ವಾತಾವರಣ ಸಿ.ಆರ್.ನವೀನ್ ಹಾಗೂ ಭವ್ಯಾ ಅವರ ಕಾಳಜಿಯಿಂದ ಸಾಧ್ಯವಾಗಿದೆ ಎಂದರು.

ಈ ಕಾರ್ಯಕ್ರಮವನ್ನು ಡಾ.ವಿಜಯಲಕ್ಷ್ಮಿ ದೇಶಮಾನೆ ಉದ್ಘಾಟಿಸಿ ಸಹಕಾರ ನೀಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅವರ ಮಾತು, ಮಾದರಿ ನಡೆಯನ್ನು ಎಲ್ಲರೂ ಅನುಸರಿಸಿ ಎಂದು ಕಿವಿ ಮಾತು ಹೇಳಿದರು.

ಅನೇಕ ಮಾಹಿತಿ ಇಲ್ಲಿ ಲಭ್ಯವಿದ್ದು, ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಇದಕ್ಕೆ ಸಹಕಾರ ನೀಡಿದ, ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.

ಕಾರ್ಯಕ್ರಮದಲ್ಲಿ ಜನಮಿತ್ರ ಸಂಪಾದಕ ಸಿ.ಆರ್.ನವೀನ್, ಮಂಜುಳಾ ಮದನಗೌಡ, ಭವ್ಯ ನವೀನ್ ಮೊದಲಾದವರಿದ್ದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳಾದ ಹರ್ಷಿತಾ,ಧನ್ಯಶ್ರೀ ಪ್ರಾರ್ಥಿಸಿದರು.

Padma Shri awardee Dr. Vijayalakshmi Deshmane called on students not to waste their time, saying that today’s children will rule the country in the future, so prepare for it right away