5.6 C
Munich
Home News Politics ಹಠಾತ್ ಹೃದಯಾಘಾತಕ್ಕೆ ಸಂಸದ ಶ್ರೇಯಸ್ ಪಟೇಲ್ ಗಂಭೀರ ಕಳವಳ, ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಕೇಂದ್ರ ಆರೋಗ್ಯ...

ಹಠಾತ್ ಹೃದಯಾಘಾತಕ್ಕೆ ಸಂಸದ ಶ್ರೇಯಸ್ ಪಟೇಲ್ ಗಂಭೀರ ಕಳವಳ, ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ

On Thursday, Hassan MP Shreyas M. Patel urged Union Minister of State for Health Anupriya Patel to ensure that the health department provides essential infrastructure to address the increasing incidents of sudden cardiac arrests in the state, particularly in Hassan.

ನವದೆಹಲಿ: ಹಾಸನ ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಗುರುವಾರ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರಿಗೆ ಮನವಿ ಸಲ್ಲಿಸಿದರು.

ಕಳೆದ 2 ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ 507 ಹೃದಯಾಘಾತ ಪ್ರಕರಣ ವರದಿಯಾಗಿದ್ದು, 140 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಶೇ. 35ರಷ್ಟು ಮಂದಿ 40 ವರ್ಷದೊಳಗಿನವರೇ ಇರುವುದು ಆತಂಕ ಮೂಡಿಸಿದೆ ಎಂದು ಸಂಸದರು ವಿವರಿಸಿದರು.

ಈ ಹಿನ್ನೆಲೆಯಲ್ಲಿ, 15 ರಿಂದ 40 ವರ್ಷದವರಿಗೆ ಕಡ್ಡಾಯ ಹೃದಯ ತಪಾಸಣೆ, ಹಠಾತ್ ಹೃದಯ ನಿಲುಗಡೆ ಪ್ರಕರಣಗಳ ಡಿಜಿಟಲ್ ದಾಖಲೆ, ಸಂಚಾರಿ ತಪಾಸಣಾ ವಾಹನಗಳು ಹಾಗೂ ಐಸಿಎಂಆರ್ (ICMR)ನಿಂದ ವಿಶೇಷ ಅಧ್ಯಯನ ನಡೆಸಲು ಸಂಸದ ಶ್ರೇಯಸ್ ಪಟೇಲ್ ಆಗ್ರಹಿಸಿದರು.

error: Content is protected !!