8.9 C
Munich
Home News ಹಾಸನ: ಪ್ರಮೋದ್ ಮುತಾಲಿಕ್ ಅಭಿನಂದನಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಹಾಸನ: ಪ್ರಮೋದ್ ಮುತಾಲಿಕ್ ಅಭಿನಂದನಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

On the 27th at 3 pm, we have organized a felicitation program for Sri Rama Sena chief Pramod Muthalik and the new state president at the city's Kannada Sahitya Parishad Bhavan.

ಹಾಸನ: ಇದೇ 27 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ದಕ್ಷಿಣ ಪ್ರಾಂತ್ ಸಹ ಕಾರ್ಯದರ್ಶಿ ಜಾನೆಕೆರೆ ಹೇಮಂತ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅದೇ ದಿನ ಹಾಸನ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನೂ ಏರ್ಪಡಿಸಿದ್ದೇವೆ ಎಂದರು. ನಗರದ ಗಣಪತಿ ಮಂಡಳಿಯ ಎಲ್ಲಾ ಸದಸ್ಯರು, ಹಿಂದೂ ಸಮಾಜದ ಎಲ್ಲ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಪ್ರಮೋದ್ ಮುತಾಲಿಕ್ ಅವರ 70 ವರ್ಷಗಳ ಹಿಂದುತ್ವದ ತಪಸ್ಸಿಗೆ ಹಾಸನದ ಜನತೆ ಗೌರವ ನೀಡಿ ಎಲ್ಲರೂ ಬರಬೇಕೆಂದರು.

ಸ್ಥಳೀಯ ಶಾಸಕ ಸ್ವರೂಪ ಪ್ರಕಾಶ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದೇವೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣೇಗೌಡ ಅವರನ್ನು ಆಹ್ವಾನಿಸಿದ್ದೇವೆ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ಮಾಜಿ ಮೇಯರ್ ಗಿರೀಶ್ ಚನ್ನವೀರಪ್ಪ ಹಿಂದೂ ಸಮಾಜ ಮುಖಂಡ ಬಿ.ಎಂ ಭುವನಾಕ್ಷ, ಹಿಂದೂ ಮುಖಂಡರಾದ ಲತೇಶ್ ಕುಮಾರ್ ಅವರನ್ನು ಆಹ್ವಾನಿಸಿದ್ದೇವೆ ಎಂದರು.

ಇದೇ ವೇಳೆ ನಮ್ಮ ಬಹುತೇಕ ಹಿಂದೂ ದೇವಾಲಯಗಳಲ್ಲಿ ಸಿಸಿ ಕ್ಯಾಮೆರಾಗಳಿದ್ದು, ಅಂತೆಯೇ ಎಲ್ಲ ಮಸೀದಿಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಹೇಮಂತ್ ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಧರ್ಮನಾಯಕ್, ದರ್ಶನ್, ಪುನೀತ್ ಕೆರೇಹಳ್ಳಿ, ದೇವರಾಜ್, ವಿನಯ್ ಕೆರೇಹಳ್ಳಿ, ಜಗದೀಶ್, ಮಹೇಶ್ ಇದ್ದರು.

error: Content is protected !!