ನುಗ್ಗೇಹಳ್ಳಿ : ಹಳ್ಳಿಗಳನ್ನು ಅಭಿವೃದ್ಧಿಪಡಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಶಾಸಕ ಸಿಎನ್ ಬಾಲಕೃಷ್ಣ ಒತ್ತಾಯಿಸಿದರು.
ಹೋಬಳಿಯ ಹುಲಿಕೆರೆ ಗ್ರಾಮದ ಶ್ರೀ ಆಲದ ಮರದಮ್ಮ ದೇವಾಲಯದ ನೂತನ ಕಾಂಪೌಂಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ನೀರಾವರಿ ಯೋಜನೆಗಳಿಗೆ ಹೆಚ್ಚು ಶಕ್ತಿ ತುಂಬುವುದರಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯ. ರೈತರು ಬೆಳೆದಂತ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದರೆ ರೈತರು ಬೆಳೆಗಳಿಂದ ನಷ್ಟ ಹೊಂದುವುದನ್ನು ತಪ್ಪಿಸಬಹುದು ಇದರ ಜೊತೆಗೆ ಸೂಕ್ತ ಮಾರುಕಟ್ಟೆ ನಿರ್ಮಾಣಕ್ಕೆ ಹೆಚ್ಚು ಗಮನ ಹರಿಸಬೇಕು.
ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ರಾಜ್ಯದಲ್ಲಿ ಕೈಗಾರಿಕಾ ವಲಯಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಮನವಿ ಮೇರೆಗೆ ಅನುದಾನ ನೀಡಲಾಗಿದೆ ಜೊತೆಗೆ ತೆಂಗು ಫಸಲು ಹಾಳಾದರೆ ವಿಶೇಷ ಪರಿಹಾರ ನೀಡಲು ಹಣ ಮೀಸಲಿಡಲಾಗಿದೆ ಎಂದರು.
ಹುಲಿಕೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಹಾಗೂ ಅಂಗನವಾಡಿ ಕಟ್ಟಡದ ನವೀಕರಣ ಸುಮಾರು 20 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ಹಾಗೂ ಗ್ರಾಮದ ವಿವಿಧ ರಸ್ತೆಗಳ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಜಲಜೀವನ್ ಯೋಜನೆಯ ಮೂಲಕ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಮುಂಬರುವ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಗಮನಹರಿಸಲಾಗುತ್ತದೆ ಎಂದು ತಿಳಿಸಿದರು.
ನುಗ್ಗೇಹಳ್ಳಿ ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಜೆಡಿಎಸ್ ಯುವ ಮುಖಂಡ ಹುಲಿಕೆರೆ ಸಂಪತ್ ಕುಮಾರ್ ಮಾತನಾಡಿ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣರವರು ಗ್ರಾಮದ ಅನೇಕ ಅಭಿವೃದ್ಧಿ ಕೆಲಸಗಳಿಗೆ ವಿಶೇಷವಾಗಿ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಇದರ ಜೊತೆಗೆ ಎಂಎಂಎಲ್ ವಶಪಡಿಸಿಕೊಂಡಿದ್ದ ಭೂಮಿಯನ್ನು ಮರಳಿ ರೈತರಿಗೆ ಕೊಡಿಸುವ ಕೆಲಸವನ್ನು ಮಾಡಿದ್ದಾರೆ.
ಗ್ರಾಮದಿಂದ ಬಾಣನಕರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಆಲದ ಮರದಮ್ಮ ದೇವಾಲಯದ ಮುಂಭಾಗ ಗೋಪುರ ನಿರ್ಮಾಣ ಗ್ರಾಮದಲ್ಲಿ ಇರುವ ಪುರಾತನ ಕಲ್ಯಾಣಿ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಆಶಾದೇವಿ ಪ್ರಕಾಶ್, ಹೊನ್ನಮ್ಮ ಧಣಿ ಕುಮಾರ್, ಅಂಗನವಾಡಿ ಶಿಕ್ಷಕಿ ಯಶೋಧ, ಮುಖಂಡರಾದ ನಾಗಮಣಿ ಪ್ರಕಾಶ್, ಚಂದ್ರೇಗೌಡ, ತೋಪೇಗೌಡ, ಹೊನ್ನೇಗೌಡ, ನಾಗೇಶ್, ರೈತ ಸಂಘದ ಶಶಿಕಲಾ, ರೇಣುಕಾ ರಂಗಸ್ವಾಮಿ, ಶಿವಕುಮಾರ್, ದಿವಾಕರ್, ಮಲ್ಲೇಶ್, ನಟರಾಜ್, ಲಿಂಗರಾಜು, ವರದರಾಜ್, ಜಯಣ್ಣ, ಉಮೇಶ್, ಹರೀಶ್, ವೆಂಕಟೇಶ್, ಆನಂದ್ ಕುಮಾರ್, ಹಾಗೂ ಗ್ರಾಮಸ್ಥರು ಹಾಜರಿದ್ದರು.










