ನುಗ್ಗೇಹಳ್ಳಿ : ಇಲ್ಲಿನ ಶ್ರೀ ಪಂಚಲಿಂಗೇಶ್ವರ ಧರ್ಮಸ್ಥಳ ಪಾದಯಾತ್ರಿಗಳ ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ 14ನೇ ವರ್ಷದ ಪವಿತ್ರ ಪಾದಯಾತ್ರೆ ಪ್ರಯುಕ್ತ ಶ್ರೀ ಸದಾಶಿವ ಸ್ವಾಮಿ ಅದು ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಪಂಚಲಿಂಗೇಶ್ವರ ಧರ್ಮಸ್ಥಳ ಪಾದಯಾತ್ರೆಗಳ ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 14ನೇ ವರ್ಷದ ಪಾದಯಾತ್ರೆ ಅಂಗವಾಗಿ ಶ್ರೀ ಸದಾಶಿವ ಸ್ವಾಮಿ ಹಾಗೂ ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ ಸೇರದಂತೆ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು.
ಶ್ರೀ ಸದಾಶಿವ ಸ್ವಾಮಿ ದೇವಾಲಯದ ಅವನದಲ್ಲಿರುವ ಮಂಟಪದಲ್ಲಿ ಮಂಜುನಾಥ ಸ್ವಾಮಿ ದೇವರ ಫೋಟೋಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಜನೆ ಕಾರ್ಯಕ್ರಮ ಮಹಾ ಮಂಗಳಾರತಿ ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಸಂಘದ ವತಿಯಿಂದ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪಾದಯಾತ್ರಿಗಳ ಸೇವಾ ಸಮಿತಿ ಅಧ್ಯಕ್ಷ ಎನ್ ಸಿ ರಾಮಕೃಷ್ಣ ( ಹೋಟೆಲ್ ರಾಜಣ್ಣ ) ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿಯ ಪ್ರಯುಕ್ತ ಗ್ರಾಮದಿಂದ 150ಕ್ಕೂ ಹೆಚ್ಚು ಪಾದಯಾತ್ರೆಗಳು ಸಂಘದ ಮೂಲಕ ಫೆಬ್ರವರಿ 9ರ ಸೋಮವಾರ ಬೆಳಗಿನ ಜಾವ ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಕೈಗೊಳ್ಳಲಾಗುವುದು,
ಫೆಬ್ರವರಿ 14ರ ಶನಿವಾರದಂದು ಬೆಳಗಿನ ಜಾವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಲಾಗುತ್ತದೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಪಕ್ಕದಲ್ಲಿ ಹೆಚ್ಚಿನ ಸುರಕ್ಷತೆಯಿಂದ ಪಾದಯಾತ್ರೆ ಕೈಗೊಳ್ಳುವಂತೆ ಮನವಿ ಮಾಡಿದರು.
ಪಾದಯಾತ್ರೆ ಸೇವಾ ಸಮಿತಿ ಕಾರ್ಯದರ್ಶಿ ಎನ್ಎಸ್ ಗಿರೀಶ್ ಕಳೆದ 14 ವರ್ಷಗಳಿಂದ ಶ್ರೀ ಪಂಚಲಿಂಗೇಶ್ವರ ಧರ್ಮಸ್ಥಳ ಪಾದಯಾತ್ರಿಗಳ ಸೇವಾ ಸಮಿತಿ ವತಿಯಿಂದ ಪಾದಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ.
ಪಾದಯಾತ್ರೆಗೆ ಈ ಭಾಗದ ದಾನಿಗಳು ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಸುರಕ್ಷತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಈ ಬಗ್ಗೆ ಎಲ್ಲರೂ ಎಚ್ಚರ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಪಾದಯಾತ್ರೆ ಸೇವಾ ಸಮಿತಿ ಗೌರವಾಧ್ಯಕ್ಷ ಅಗ್ರಹಾರ ಬೆಳಗುಲಿ ದೊಡ್ಡೇಗೌಡ, ಉಪಾಧ್ಯಕ್ಷ ಮುದ್ದನಹಳ್ಳಿ ರಾಜಣ್ಣ, ಖಜಾಂಚಿ ವಿಮಲ್ ಸೇಠು, ಸದಸ್ಯರಾದ ವಿರೂಪಾಕ್ಷ, ಗಣೇಶ್, ರವಿಶಾಚಾರ್, ಕೆಂಪೇಗೌಡ, ಗುಂಡ ( ಪುರಿ) ಎನ್ಕೆ ಲೋಕೇಶ್ , ರವಿ ಆರ್ಟ್ಸ್, ನಾರಾಯಣಗೌಡ, ಹೊನ್ನೇಗೌಡ, ಎನ್ಎಸ್ ಮಹೇಶ್, ಒಂಟಿಮಾವಿನಹಳ್ಳಿ ಮಂಜುನಾಥ್, ಅರ್ಚಕ ರಘು ದೀಕ್ಷಿತ್, ಉದ್ಯಮಿ ಮಂಜುನಾಥ್, ಪ್ರಮುಖರಾದ ಎಚ್ ಎಂ ಜಯರಾಮ್, ಎನ್ ಎಸ್ ಲಕ್ಷ್ಮಣ್, ಪೊಲೀಸ್ ಕುಮಾರ್, ಶಶಿ ದೇವರಾಜ್, ಪಾದಯಾತ್ರೆ ಸಮಿತಿ ಸದಸ್ಯರು ಇದ್ದರು.










