1.4 C
Munich
Home News Politics ಹಾಸನ ನಗರಸಭೆ ಅಧ್ಯಕ್ಷರ ಕಚೇರಿ ಗೋಡೆಯಲ್ಲಿ ಪ್ರೀತಂಗೌಡ ಫೋಟೋ!: ತಮ್ಮ ಅಧಿಕಾರ ಕಸಿಯಲು ಯತ್ನಿಸಿದ ಜೆಡಿಎಸ್...

ಹಾಸನ ನಗರಸಭೆ ಅಧ್ಯಕ್ಷರ ಕಚೇರಿ ಗೋಡೆಯಲ್ಲಿ ಪ್ರೀತಂಗೌಡ ಫೋಟೋ!: ತಮ್ಮ ಅಧಿಕಾರ ಕಸಿಯಲು ಯತ್ನಿಸಿದ ಜೆಡಿಎಸ್ ವರಿಷ್ಠರಿಗೆ ಚಂದ್ರೇಗೌಡ ಟಕ್ಕರ್

ಹಾಸನ, ಏಪ್ರಿಲ್ 28, 2025:  ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯ ಸೋಲಿಸಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ  ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಫೋಟೋವನ್ನು ತಮ್ಮ ಕಚೇರಿಯ ಕುರ್ಚಿ ಹಿಂಭಾಗದ ಗೋಡೆಗೆ ಹಾಕಿಸುವ ಮೂಲಕ ಜೆಡಿಎಸ್ ವರಿಷ್ಠರಿಗೆ ಟಕ್ಕರ್ ನೀಡಿದ್ದಾರೆ.

ಅಧ್ಯಕ್ಷರ ಕುರ್ಚಿ ಹಿಂಭಾಗದ ಗೋಡೆಯಲ್ಲಿ ಸ್ಚರೂಪ್, ಪ್ರೀತಂ ಅವರ ಫೋಟೋಗಳು

ಈವರೆಗೆ ಅಧ್ಯಕ್ಷರ ಕಚೇರಿಯಲ್ಲಿ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್‌ರ ಫೋಟೋ ಮಾತ್ರವೇ ಇತ್ತು, ಈಗ ಪ್ರೀತಂಗೌಡರ ಫೋಟೋ ಸೇರಿರುವುದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದಂತಾಗಿದೆ.

ಬಿಜೆಪಿಯ 13 ನಗರಸಭೆ ಸದಸ್ಯರು ಚಂದ್ರೇಗೌಡರ ಪರವಾಗಿ ಮತ ಚಲಾಯಿಸಿದ್ದು, ಪ್ರೀತಂಗೌಡರ ಬೆಂಬಲವೇ ಈ ಗೆಲುವಿಗೆ ಪ್ರಮುಖ ಕಾರಣವಾಯಿತು. ಗೆಲುವಿನ ನಂತರ ಚಂದ್ರೇಗೌಡರು ಪ್ರೀತಂಗೌಡ ಹಾಗೂ ಸಂಸದ ಶ್ರೇಯಸ್‌ಪಟೇಲ್‌ಗೆ ಧನ್ಯವಾದ ಸಲ್ಲಿಸಿದ್ದರು. ಈ ರಾಜಕೀಯ ಚಾಣಾಕ್ಷತೆಯ ಮೂಲಕ ಚಂದ್ರೇಗೌಡರು ಹಾಸನ ನಗರಸಭೆಯಲ್ಲಿ ತಮ್ಮ ಪ್ರಾಬಲ್ಯವನ್ನು ಗಟ್ಟಿಗೊಳಿಸಿದ್ದಾರೆ.

error: Content is protected !!