ಹಳೇಬೀಡು: ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ಹಳೇಬೀಡಿನಲ್ಲಿ ಕೈಗೊಂಡಿರುವ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲಾಗಿದ್ದು, ಸಕಾಲಕ್ಕೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಹಳೇಬೀಡಿನ ರಾಜನಶಿರಿಯೂರು ಅಡ್ಡ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಂತಹಂತವಾಗಿ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪಂಚಾಯತ್ ರಾಜ್ ಇಲಾಖೆಯ ಶಾಸಕರ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಸುರೇಶ್ ಹೇಳಿದರು.
ಹಳೇಬೀಡಿನ ರಾಜನಶಿರಿಯೂರು ಮುಖ್ಯರಸ್ತೆಯಿಂದ ಕಲ್ಮಠ ಬೀದಿಗೆ ಸಂಪರ್ಕ ಕಲ್ಪಿಸುವ ಎರಡು ಅಡ್ಡರಸ್ತೆಗಳ ಅಭಿವೃದ್ದಿಗೆ ₹8ಲಕ್ಷ ಹಣ ಮಂಜೂರಾಗಿದೆ. ಬಸ್ತಿ ಹಳ್ಳಿಯ ಜೈನ ಬಸದಿ ಮುಖ್ಯರಸ್ತೆಯಿಂದ ಊರಿನ ಒಳಭಾಗದ ರಸ್ತೆ ನಿರ್ಮಾಣಕ್ಕೆ ₹ 5ಲಕ್ಷ ಹಣ ಮಂಜೂರಾಗಿದೆ. ಬಸ್ತಿಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಕಟ್ಟಡ ನಿರ್ಮಾಣಕ್ಕೆ ₹14ಲಕ್ಷ ಹಣ ಮಂಜೂರಾಗಿದೆ. ಪಂಚಾಯತ್ ರಾಜ್ ಇಲಾಖೆಯ ಶಾಸಕರ ₹27 ಲಕ್ಷ ಅನುದಾನದಲ್ಲಿ ಹಳೇಬೀಡು ಭಾಗದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸುರೇಶ್ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಮಧು, ಪಿಡಿಒ ಎಸ್.ಸಿ.ವಿರೂಪಾಕ್ಷ, ಮುಖಂಡರಾದ ಸಿ.ಎಸ್.ಪ್ರಕಾಶ್, ಎಚ್.ಪರಮೇಶ್, ಬಿ.ಎಸ್.ಸೋಮಶೇಖರ್, ಎಚ್.ಸಿ.ಚೇತನ್, ರಂಜಿತ್, ಎಚ್.ಎಂ.ಬಸವರಾಜು, ಈಶ್ವರ್.ಎನ್.ಕೆ ಭಾಗವಹಿಸಿದ್ದರು.
MLA H.K. Suresh said that the ground breaking ceremony for the works undertaken in Halebid under the Rural Development Project has been performed and the contractors have been instructed to carry out quality work on time.










