ನುಗ್ಗೇಹಳ್ಳಿ: ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ನಿರ್ಮಾಣಕ್ಕೆ ಕೇಂದ್ರ–ರಾಜ್ಯ ಸರ್ಕಾರಗಳು ಮುಂದಾಗಲಿ: ಶಾಸಕ ಸಿ.ಎನ್. ಬಾಲಕೃಷ್ಣ

MLA CN Balakrishna urged the central and state governments to take steps to create appropriate markets to encourage farmers and avoid losses from the crops they grow.

ನುಗ್ಗೇಹಳ್ಳಿ : ರೈತರು ಬೆಳೆಯುವ ಬೆಳೆಗಳಿಂದ ನಷ್ಟ ತಪ್ಪಿಸಲು ಜೊತೆಗೆ ರೈತರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕ ಸಿಎನ್ ಬಾಲಕೃಷ್ಣ ಒತ್ತಾಯ ಮಾಡಿದರು.

ಹೋಬಳಿ ಕೇಂದ್ರದ ಕರ್ನಾಟಕ ರಾಜ್ಯ ರೈತ ಸಂಘ ( ಕೆ ಎಸ್ ಪುಟ್ಟಣ್ಣಯ್ಯ ) ಬಣದ ವತಿಯಿಂದ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಟೊಮೋಟೊ, ಈರುಳ್ಳಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರು ಬೆಳೆದಿರುವ ಕೃಷಿ ಉತ್ಪನ್ನಗಳಿಂದ ನಷ್ಟ ಉಂಟಾಗುತ್ತದೆ ಇದನ್ನು ತಪ್ಪಿಸಿರುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾರುಕಟ್ಟೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಆಗ ರೈತರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

ಹೋಬಳಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಹಾಗೂ ಹೋಬಳಿ ಸಮಿತಿ ವತಿಯಿಂದ ವಿಶ್ವ ರೈತ ದಿನಾಚರಣೆ ಆಚರಣೆಯಿಂದ ಸಂಘಟನೆಯ ದೃಷ್ಟಿಯಿಂದ ರೈತ ಸಂಘ ಮತ್ತಷ್ಟು ಪ್ರಬಲ ಗೊಂಡಿದೆ ಈಗಾಗಲೇ ತಾಲೂಕಿನಲ್ಲಿ ಸುಮಾರು 15 ಸಾವಿರ ರೈತರು 03 ಲಕ್ಷಕ್ಕೂ ಅಧಿಕ ಕ್ವಿಂಟಲ್ ರಾಗಿ ಖರೀದಿ ಮಾಡಲು ನೋಂದಣಿ ಮಾಡಿಸಿದ್ದು ಶೀಘ್ರ ಸರ್ಕಾರ ಎಪಿಎಂಸಿ ಮೂಲಕ ಖರೀದಿಗೆ ಚಾಲನೆ ನೀಡುವಂತೆ ರೈತ ಸಂಘ ಸದಸ್ಯರು ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಜೊತೆಗೆ ನಾನು ಕೂಡ ಬೆಂಬಲಕ್ಕೆ ನಿಲ್ಲುವುದಾಗಿ ರೈತ ಸಂಘದ ಸದಸ್ಯರಿಗೆ ಮನವಿ ಮಾಡಿದರು.

ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆ ಅಭಿವೃದ್ಧಿಗೆ ಈಗಾಗಲೇ 1 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಎಪಿಎಂಸಿ ಮಾರುಕಟ್ಟೆ ಸಚಿವರಿಗೆ ಮನವಿ ಮಾಡಲಾಗಿದ್ದು ಸದ್ಯದಲ್ಲೇ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. ರೇಷ್ಮೆ ಬೆಳೆಯಲು ಸರ್ಕಾರದಿಂದ ಹೆಚ್ಚಿನ ಸಹಾಯಧನ ಬರುತ್ತಿದ್ದು ತಾಲೂಕಿನ ರೈತರು ಈ ಸದುಪಯೋಗವನ್ನು ಪಡೆದುಕೊಂಡು ರೇಷ್ಮೆ ಬೆಳೆಯಲು ಹೆಚ್ಚು ಆಸಕ್ತಿ ವಹಿಸುವಂತೆ ತಿಳಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಎ ಗೋಪಾಲಸ್ವಾಮಿ ಮಾತನಾಡಿ, ರೈತ ಈ ದೇಶದ ಬೆನ್ನೆಲುಬು ರೈತ ದುಡಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ, ಈ ಹಿಂದೆ ನಮ್ಮ ಹಿರಿಯರು “ಜೈ ಜವಾನ್ ಜೈ ಕಿಸಾನ್” ಎಂದು ಹೇಳಿದರು. ಅವರ ಮಾತು ಈಗ ನೂರಕ್ಕೆ ನೂರರಷ್ಟು ಸತ್ಯವಾಗಿದೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೃಷಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವ ಮೂಲಕ ರೈತರಿಗೆ ಇಲಾಖೆಯ ಮೂಲಕ ರಿಯಾಯಿತಿ ದರದಲ್ಲಿ ಸ್ಪಿಂಕ್ಲರ್ ಸೆಟ್ ಯಂತ್ರೋಪಕರಣಗಳು ಬಿತ್ತನೆ ಬೀಜ ಸೇರಿದಂತೆ ಅವಮಾನ ವೈಪರಿತದಿಂದ ರೈತರು ಬೆಳೆದಿರುವ ಬೆಳೆಗಳು ಹಾಳಾದರೆ ವಿಮೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ರೈತರ ನೆರವಿಗೆ ಸರ್ಕಾರ ನಿಂತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಹಿಂದಿನ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡುವ ರೈತರಿಗೆ ಶಕ್ತಿ ತುಂಬಿರುವ ಕೆಲಸವನ್ನು ಮಾಡಿದ್ದರು ಎಂದರು.

ತಾಲೂಕು ಅಧ್ಯಕ್ಷ ಎಸ್ ಎಸ್ ರಾಮಚಂದ್ರು ಮಾತನಾಡಿ, ರೈತ ಸಂಘಟನೆಗಳು ರಾಜ್ಯದಲ್ಲಿ ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಯಾವುದೇ ಸರ್ಕಾರಗಳಿಂದ ರೈತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಈ ಬಗ್ಗೆ ರೈತ ಸಂಘಟನೆಗಳು ಚಿಂತಿಸುವ ಅಗತ್ಯವಿದೆ ಎಂದರು.

ಶಾಸಕರನ್ನು ಎತ್ತಿನ ಗಾಡಿಯಲ್ಲಿ ಕರೆತಂದ ರೈತ ಮುಖಂಡರು:

ಹೋಬಳಿ ಪ್ರಾರಂಭದಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಅವರನ್ನು ಸ್ವಾಗತಿಸಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ಎತ್ತಿನಗಾಡಿಯ ಮೂಲಕ ಕರೆತರಲಾಯಿತು ಶಾಸಕರು ಹೆಚ್ಚು ಸಂತೋಷದಿಂದ ಎತ್ತಿನ ಹಗ್ಗವನ್ನು ಹಿಡಿಯುವ ಮೂಲಕ ಗಾಡಿಯನ್ನು ಚಲಾಯಿಸಿದರು.
ಹೋಬಳಿ ರೈತ ಸಂಪರ್ಕ ಕೇಂದ್ರದಿಂದ ರೈತ ಸಂಘದ ಸದಸ್ಯರ ಹಾಗೂ ವೀರಗಾಸೆ ಕುಣಿತದ ಮೆರವಣಿಗೆಗೆ ಮಾಜಿ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ಹೋಬಳಿ ಕೃಷಿ ಅಧಿಕಾರಿ ಜಿ ವಿ ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗ್ರಾಪಂ ಅಧ್ಯಕ್ಷ ನಟರಾಜ್ , ಮಾಜಿ ಗ್ರಾಪಂ ಅಧ್ಯಕ್ಷ ಎನ್ಎಸ್ ಲಕ್ಷ್ಮಣ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಮಂಜುನಾಥ್, ತಾಪಂ ಪುಟ್ಟಸ್ವಾಮಿ, ಸದಸ್ಯ ರಾಜ್ಯ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾಧ್ಯಕ್ಷ ರಘು, ಕಾರ್ಯಧ್ಯಕ್ಷ ಎಂಎಲ್ ಹರೀಶ್, ಹೋಬಳಿ ಅಧ್ಯಕ್ಷ ಸೋಮಶೇಖರಯ್ಯ , ರೈತ ಸಂಘದ ಪ್ರಮುಖರಾದ ಮೈಸೂರು ಕುಮಾರ್ , ಪಟೇಲ್ ಬೋರೇಗೌಡ, ಮೀಸೆ ಮಂಜಣ್ಣ, ಸೊಪ್ಪಿನ ಹಳ್ಳಿ ಶಿವಣ್ಣ, ಕಾಮಾಕ್ಷಮ್ಮ, ದೊಡ್ಡೇರಿ ತಾಂಡವೇಶ್, ಸಂತೇ ಶಿವರ ರಾಜಣ್ಣ , ಹುಲಿಕೆರೆ ಶಶಿಕಲಾ, ಅಗ್ರಹಾರ ಬೆಳಗುಲಿ ಆಟೋ ರಾಜಣ್ಣ, ಹುಲ್ಲೇನಹಳ್ಳಿ ಅಮಾಸಯ್ಯ, ಗಿರೀಶ್, ಶಿವಲಿಂಗ, ತಿಮ್ಮೇಗೌಡ, ಶಿವರಾಂ, ಪುಟ್ಟಸ್ವಾಮಿ, ಕೋವಿ ಬಾಬಣ್ಣ, ತೋಟಗಾರಿಕಾ ಇಲಾಖೆ ಅಧಿಕಾರಿ ರವಿ ನಾಯಕ್, ಸೇರಿದಂತೆ ರೈತ ಸಂಘದ ಪ್ರಮುಖರು ವಿವಿಧ ಸಂಘಟನೆಗಳ ಸದಸ್ಯರು ಹಾಜರಿದ್ದರು.

MLA CN Balakrishna urged the central and state governments to take steps to create appropriate markets to encourage farmers and avoid losses from the crops they grow.