ಸಕಲೇಶಪುರ ತಾಲೂಕಿನಲ್ಲಿ ಆದ್ಯತೆಯ ಮೇರೆಗೆ ರಸ್ತೆ ಅಭಿವೃದ್ಧಿ: ಶಾಸಕ ಸಿಮೆಂಟ್ ಮಂಜು

MLA Cement Manju said that road works are being carried out at various places in Sakleshpur taluk on a priority basis.

ಸಕಲೇಶಪುರ: ತಾಲೂಕಿನಲ್ಲಿ ಆದ್ಯತೆಯ ಆಧಾರದ ಮೇಲೆ ವಿವಿಧೆಡೆ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಮಳಲಿ ಗ್ರಾ.ಪಂ ವ್ಯಾಪ್ತಿಯ ಮಠಸಾಗರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ಕ್ಯಾನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬುಗುಡಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮಳಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಠಸಾಗರದಿಂದ ಐತಿಹಾಸಿಕ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು 20ಲಕ್ಷರೂ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದ್ದು ಜೊತೆಗೆ ಕ್ಯಾನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬುಗುಡಹಳ್ಳಿ ಗ್ರಾಮದಲ್ಲಿ ಸಹ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು 20ಲಕ್ಷ ರೂ ವೆಚ್ಚದಲ್ಲಿ ಮಾಡಲಾಗುತ್ತಿದೆ. ಇರುವ ಅನುದಾನದಲ್ಲಿ ಆದ್ಯತೆಯ ಮೇಲೆ ಕಾಮಗಾರಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಪ್ರತಿ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳುತ್ತೇನೆ.

ನಾನು ಶಾಸಕನಾಗಿ ಜನರ ಮಧ್ಯದಲ್ಲೇ ಇದ್ದು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಖುದ್ದಾಗಿ ಅರಿವು ಹೊಂದಿ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡುವೆ. ಗುತ್ತಿಗೆದಾರರು ಇಲ್ಲಿ ಗುಣಮಟ್ಟದ ರಸ್ತೆ ಮಾಡಬೇಕು ಹಾಗೂ ಜನರು ಸಹ ಕಾಮಗಾರಿಯ ಮೇಲೆ ನಿಗವರಿಸಬೇಕು ಎಂದರು.

ಗ್ರಾಮಸ್ಥ ಪ್ರಸನ್ನ ಮಾತನಾಡಿ, ಬುಗಡಹಳ್ಳಿ ಗ್ರಾಮದಲ್ಲಿ ಹಲವು ದಶಕಗಳ ನಂತರ ರಸ್ತೆ ನಿರ್ಮಾಣವಾಗುತ್ತಿದೆ. ಹೀಗಾಗಿ ಗ್ರಾಮಸ್ಥರೆಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಬ್ಯಾಕರವಳ್ಳಿ ಜಯಣ್ಣ, ಕ್ಯಾನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಮಂಚಹಳ್ಳಿ ಮೋಹನ್, ಮಾಜಿ ಉಪಾಧ್ಯಕ್ಷರುಗಳಾದ ರಾಧಮ್ಮ, ಪ್ರತಾಪ್, ಪಕ್ಷದ ಮುಖಂಡರುಗಳಾದ ಕ್ಯಾನಹಳ್ಳಿ ವಾಸು, ಅನಿಲ್, ತಿರುಮಲ ಸೇರಿದಂತೆ ಇತರರು ಹಾಜರಿದ್ದರು.

MLA Cement Manju said that road works are being carried out at various places in Sakleshpur taluk on a priority basis.