14.6 C
Munich
Home News ಮಂಜರಾಬಾದ್ ಕೋಟೆ ಅಭಿವೃದ್ಧಿಗೆ ಕ್ರಮ : ಶಾಸಕ ಸಿಮೆಂಟ್ ಮಂಜು

ಮಂಜರಾಬಾದ್ ಕೋಟೆ ಅಭಿವೃದ್ಧಿಗೆ ಕ್ರಮ : ಶಾಸಕ ಸಿಮೆಂಟ್ ಮಂಜು

ಸಕಲೇಶಪುರ : ಪ್ರವಾಸೋದ್ಯಮಕ್ಕೆ ಹೆಸರುವಾಸಿ ವಾಗಿರುವ ಮಂಜರಾಬಾದ್ ಕೋಟೆಯನ್ನು ಮುಂದಿನ ದಿನಗಳಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಮಂಜರಾಬಾದ್ ಕೋಟೆಯ ಒಂದು ಭಾಗ ಕುಸಿತ ಕಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕುಸಿತದ ಭಾಗವನ್ನು ಪರಿಶೀಲಿಸಿದ ನಂತರ ಮಾತನಾಡಿ ಐತಿಹಾಸಿಕ ಮಂಜರಾಬಾದ್ ಕೋಟೆ ದಿನನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿದೆ.

ಅತಿಯಾದ ಮಳೆಯಿಂದ ಕೋಟೆಯ ಒಂದು ಭಾಗ ಕುಸಿದಿರುವುದು ಬೇಸರದ ಸಂಗತಿ ಆಗಿದೆ. ಇತಿಹಾಸಕ್ಕೆ ಯಾವುದೇ ಧಕ್ಕೆ ಬರದಂತೆ ಕೋಟೆಯ ಬಿದ್ದಿರುವ ಭಾಗವನ್ನು ಸರಿಪಡಿಸಲು ಪುರಾತತ್ವ ಇಲಾಖೆಗೆ ಆದೇಶ ಮಾಡಲಾಗುವುದು. ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಅನುದಾನ ಮಂಜುರಾಗದ ಕಾರಣ ಪ್ರವಾಸಿ ಸ್ಥಳಗಳು ಅಭಿವೃದ್ಧಿಯಾಗಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಮಂಜರಾರಾಬಾದ್ ಕೋಟೆಯನ್ನು ಪುರಾತತ್ವ ಇಲಾಖೆ ಹಾಗೂ ಪ್ರವಾಸ ಇಲಾಖೆ ಸಹಯೋಗದಲ್ಲಿ ಕೋಟೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

error: Content is protected !!