ಸಕಲೇಶಪುರ: ಹಾನುಬಾಳು ಗ್ರಾಮ ಪಂಚಾಯಿತಿಯ ನವೀಕೃತ ಸಭಾಂಗಣವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನವೀಕೃತ ಸಭಾಂಗಣವು ಗ್ರಾಮ ಪಂಚಾಯಿತಿಯ ಆಡಳಿತಾತ್ಮಕ ಚಟುವಟಿಕೆಗಳು, ಸಾರ್ವಜನಿಕ ಸಮಸ್ಯೆಗಳ ಚರ್ಚೆ ಹಾಗೂ ಅಭಿವೃದ್ಧಿ ಕಾರ್ಯಗಳ ಸಮನ್ವಯಕ್ಕೆ ಪರಿಣಾಮಕಾರಿಯಾಗಿ ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕೆ.ಆರ್., ಉಪಾಧ್ಯಕ್ಷೆ ಶೈಲಾ ರುದ್ರೇಶ್, ಪಂಚಾಯಿತಿ ಸದಸ್ಯರಾದ ಶ್ರೀ ಮೋಹನ್ ಕುಮಾರ್ ಅಚ್ಚರಡಿ, ಶ್ರೀ ಸುರೇಶ್ ಹಾಗೂ ಶ್ರೀ ಯೋಗರಾಜ್ ಸಹಾಯಕ ನಿರ್ದೇಶಕ ಶ್ರೀ ಆದಿತ್ಯ ಹೆಚ್.ಎ., ಹಳೆ ವಿದ್ಯಾರ್ಥಿ ಸಂಘದ ಪ್ರತಿನಿಧಿ ಚಂದ್ರಣ್ಣ, ಹಿರಿಯರಾದ ಹಾನುಬಾಳು ಭಾಸ್ಕರ್, ಎಸ್‌ಡಿಎಂಸಿ ಅಧ್ಯಕ್ಷ ಶ್ರೀ ಅಣ್ಣು, ಪಿಡಿಓ ಹಾಗೂ ಸಹಾಯಕ ನಿರ್ದೇಶಕ (ಪಂ.ರಾಜ್) ಶ್ರೀ ಹರೀಶ್ ಕೆ. ಇದ್ದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೀಣಾ ಕಾರ್ಯಕ್ರಮಕ್ಕೆ ಸ್ವಾಗತಿಸಿ ವಂದಿಸಿದರು. ಕಚೇರಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
MLA Cement Manju inaugurated the renovated hall of Hanubalu Gram Panchayat.










