ಚನ್ನರಾಯಪಟ್ಟಣ: ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದನೆ

MLA C.N. Balakrishna said that dairy development plays a vital role in making farmers self-reliant in rural areas, and it is our duty to give priority to this sector.

ಚನ್ನರಾಯಪಟ್ಟಣ: ಗ್ರಾಮೀಣ ಪ್ರದೇಶದಲ್ಲಿ ರೈತರು ಸ್ವಾವಲಂಬಿಗಳಾಗಲು ಹೈನುಗಾರಿಕೆ ಅಭಿವೃದ್ಧಿ ಬಹುಮುಖ್ಯ ಪಾತ್ರ ವಹಿಸಿದ್ದು, ಈ ಕ್ಷೇತ್ರಕ್ಕೆ ಆದ್ಯತೆ ನೀಡುವುದು ನಮ್ಮ ಕರ್ತವ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ತಾಲೂಕಿನ ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ನಿರ್ದೇಶಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗುವ ಮೊದಲು ತಾಲೂಕಿನಲ್ಲಿ ಕೇವಲ 35 ಸಂಘಗಳಿದ್ದವು. ಇಂದು 342 ಸಂಘಗಳು ಸ್ಥಾಪನೆಯಾಗಿವೆ ಎಂದರು.

307 ಹೊಸ ವೈರಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಹೈನುಗಾರಿಕೆಯ ಉತ್ತೇಜನದಿಂದ ರೈತರ ಆರ್ಥಿಕ ಬದುಕು ಸುಧಾರಿಸಿದ್ದು, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮನೆಗಳಲ್ಲಿ ಹಸುಗಳನ್ನು ಸಾಕಿ ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ನಾನು ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿದ್ದ ಅವಧಿಯಿಂದಲೂ ಶಿಕ್ಷಣ, ಆರೋಗ್ಯ, ಕೃಷಿ, ಹೈನುಗಾರಿಕೆ, ಸಹಕಾರಿ ಕ್ಷೇತ್ರ, ಕ್ರೀಡೆ ಹಾಗೂ ಸಾಹಿತ್ಯ ಕ್ಷೇತ್ರ ಸೇರಿದಂತೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶ್ರಮ ವಹಿಸಿದ್ದೇವೆ. ಆಯಾ ಕಾಲಘಟ್ಟದಲ್ಲಿ ಯಾವುದೇ ಸರ್ಕಾರಗಳು ಇದ್ದರೂ ಸಹ ಶಾಸನ ಬದ್ಧವಾಗಿ ಕೊಟ್ಟ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಜನತೆಯ ಪರವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಡೈರಿ ಕಟ್ಟಡ ನಿರ್ಮಾಣಕ್ಕೆ ಸಹಾಯಧನ, ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಡೈರಿ ವ್ಯವಸ್ಥೆ ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಹಾಗೂ ಮಾಜಿ ಸಚಿವ ರೇವಣ್ಣನವರ ಶ್ರಮವಿದೆ. ಕೊಳವೆ ಬಾವಿಗಳು ನೀರಿಲ್ಲದೆ ಒಣಗಿದ ಸಂದರ್ಭದಲ್ಲಿ ರೈತ ಮಹಿಳೆಯರ ಮಾಂಗಲ್ಯ ಸರವನ್ನು ಮಾರಾಟ ಮಾಡಿ ಕೊಳವೆಬಾವಿ ಕೊರೆಸುವ ಪರಿಸ್ಥಿತಿ ಇತ್ತು. ಈ ಭಾಗದಲ್ಲಿ ಹೇಮಾವತಿ ನಾಲೆಯಿಂದ ಏತನೀರಾವರಿ ಮೂಲಕ ಕೆರೆಗಳನ್ನು ತುಂಬಿಸಿದ ಪರಿಣಾಮವಾಗಿ ಕೊಳವೆಬಾವಿಗಳು ಪುನಶ್ಚೇತನಗೊಂಡಿದ್ದು, ಶೇ. 95 ರಷ್ಟು ನೀರಾವರಿ ಆಗಿದೆ. ಸ್ಪೇಸ್ ವರದಿಯ ಪ್ರಕಾರ ನಮ್ಮ ತಾಲೂಕು ಬ್ಲಾಕ್ ಏರಿಯದಿಂದ ಹೊರತೆಗೆಯಲು ಶ್ರಮ ವಹಿಸಿದ್ದೇವೆ ಎಂದು ತಿಳಿಸಿದರು.

ಇದರಿಂದ ತೆಂಗಿನ ಪಸಲು ಉತ್ತಮ ಇಳುವರಿಯಾಗಿದ್ದು, ರೈತರು ಮೆಕ್ಕೆ ಜೋಳ ಬೆಳೆಯುತ್ತಿರುವುದರಿಂದ ಎಕರೆಗೆ 50 ರಿಂದ 60 ಸಾವಿರ ಅಧ್ಯಾಯ ಪಡೆಯುವಂತಾಗಿದೆ. ಅಲ್ಲದೆ ಹೈನುಗಾರಿಕೆಗೆ ಉತ್ತೇಜನವಾಗಿದೆ. 2,76,000 ಲೀಟರ್ ಹಾಲಿನ ಉತ್ಪಾದನೆಯಾಗುತ್ತಿದ್ದು, 400 ಕೋಟಿ ವಹಿವಾಟು ಆಗುತ್ತಿದೆ. ಹಾಲಿನ ಉತ್ಪಾದನೆಯಲ್ಲಿ ನಮ್ಮ ತಾಲೂಕು ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ರೈತರ ಆರ್ಥಿಕ ಸ್ಥಿತಿ ದ್ವಿಗುಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ರಮೇಶ್ ಕುಂಬಾರಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ವಳಗೆರಳ್ಳಿ ಮಂಜಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲತಾ ತಮ್ಮಯ್ಯ, ಜಯರಾಮ್, ಮುಖಂಡರಾದ ಪ್ರವೀಣ್ ಚಿಕ್ಕಬಿಳ್ತಿ, ಸಿಂಹಾದ್ರಿ ಮಂಜಣ್ಣ, ಗೇಣಿದಾರ್, ಕಾಳೇಗೌಡ, ರವಿ, ದೊರೆಸ್ವಾಮಿ, ಎಚ್.ಎನ್.ಮಂಜೇಗೌಡ, ಗೋವಿಂದೇಗೌಡ ಮುಂತಾದವರಿದ್ದರು.

MLA C.N. Balakrishna said that dairy development plays a vital role in making farmers self-reliant in rural areas, and it is our duty to give priority to this sector.