1.4 C
Munich
Home News Politics ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ಮೋದಿ ಕ್ರಮಕೈಗೊಳ್ಳಲಿ: ಕೆ.ಎಂ. ಶಿವಲಿಂಗೇಗೌಡ ಆಗ್ರಹ

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ಮೋದಿ ಕ್ರಮಕೈಗೊಳ್ಳಲಿ: ಕೆ.ಎಂ. ಶಿವಲಿಂಗೇಗೌಡ ಆಗ್ರಹ

ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ, ಡಿಸಿಎಂ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. | ಇವರ ಮಾನ, ಮರ್ಯಾದೆ ಹರಾಜಾಗಿ ಹೋಗಿದೆ

ಹಾಸನ: ಪ್ರಧಾನಿ ನರೇಂದ್ರ ಮೋದಿ ಪ್ರಜ್ವಲ್ ಗೆ ಉಗ್ರ ಶಿಕ್ಷೆಯಾಗಲಿ ಎಂದು ಹೇಳಿಕೆ ಕೊಟ್ಟರೆ ಸಾಲದು, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆತನನ್ನು ಬಂಧಿಸಿ ಕರೆತರಲು ಕ್ರಮಕೈಗೊಳ್ಳಬೇಕು ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್‌ರೇವಣ್ಣಗೆ ಉಗ್ರ ಶಿಕ್ಷೆಯಾಗಲಿ ಎಂದು ಪ್ರಧಾನಮಂತ್ರಿ ಹೇಳಿರುವುದನ್ನು ಸ್ವಾಗತ ಮಾಡುತ್ತೇವೆ. ವಿದೇಶದಲ್ಲಿರುವ ಆತನೇ ಬಂದು ಶರಣಾಗತಿಯಾಗಬೇಕಿತ್ತು. ಆದರೆ ಅವನು ತಲೆಮರೆಸಿಕೊಂಡಿದ್ದಾನೆ. ಪ್ರಧಾನಮಂತ್ರಿ ನರೇಂದ್ರಮೋದಿಯವರು ಆತನನ್ನು ಕರೆತರುವಂತೆ ಮಾಡಬೇಕು ಎಂದರು.

ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ, ಡಿಸಿಎಂ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರ ಮಾನ, ಮರ್ಯಾದೆ ಹರಾಜಾಗಿ ಹೋಗಿದೆ. ಇಂತಹ ಪಕ್ಷ ಈ ರಾಜ್ಯಕ್ಕೆ ಬೇಡ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಮಾಡಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ.

ರೇವಣ್ಣ ಅವರು ಎಸ್ಐಟಿ ವಿಚಾರಣೆಗೆ ಹೋಗಿ ಹೇಳಿಕೆ ಕೊಡಬೇಕಿತ್ತು. ಮೂರು ನೋಟೀಸ್ ಕೊಟ್ಟರೂ ಇವರು ಹೋಗಲಿಲ್ಲ. ವಿಧಿಯಿಲ್ಲದೇ ಅರೆಸ್ಟ್ ಮಾಡಿದ್ದಾರೆ. ಈಗ ನ್ಯಾಯಂಗ ಬಂಧನಕ್ಕೆ ನೀಡಿದ್ದಾರೆ. ಇದರಲ್ಲಿ ಏನು ರಾಜಕೀಯ ಇದೆ ಎಂದು ಪ್ರಶ್ನಿಸಿದರು.

ಹೊಡೆದಾಡುತ್ತಿರುವವರು ಒಕ್ಕಲಿಗರೇ, ಇಬ್ಬರು ಒಕ್ಕಲಿಗರ ನಡುವೆ ಕಾಳಗ ನಡೆಯುತ್ತಿದೆ. ಈ ಕೃತ್ಯ ಎಸಗಿರುವವನು ಒಕ್ಕಲಿಗನೇ. ಒಬ್ಬರನ್ನೊಬ್ಬರು ಕೆಡವಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ತನಿಖೆಯಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಬಂದರೆ ಅವರು ಅನುಭವಿಸುತ್ತಾರೆ. ಅದನ್ನು ಬಿಟ್ಟು ದಿಕ್ಕು ತಪ್ಪಿಸಲು ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಸ್ವಲ್ಪ ಗೌರವ, ಮರ್ಯಾದೆಯಿಂದ‌ ನಡೆದುಕೊಳ್ಳಬೇಕು. ಮುಂದೆ ಏನಾಗುತ್ತದೆ ಎನ್ನುವುದನ್ನು ಸ್ವಲ್ಪ ದಿನ ಕಾದು ನೋಡಬೇಕು ಎಂದರು.

error: Content is protected !!