ನುಗ್ಗೇಹಳ್ಳಿ: ಕಲ್ಕೆರೆ ಕೃಷಿಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ ಡಿ.ಎಸ್. ಸುರೇಶ್ ಅಧ್ಯಕ್ಷರಾಗಿ ಆಯ್ಕೆ

JDS-backed Devigere D.S. Suresh won the election held on Wednesday for the post of president of Kalkere Primary Agricultural Cooperative Society in Nuggehalli hobli.

ನುಗ್ಗೇಹಳ್ಳಿ : ಹೋಬಳಿಯ ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ದೇವಿಗೆರೆ ಡಿ.ಎಸ್. ಸುರೇಶ್ ಜಯಗಳಿಸಿದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಕೆ. ಎನ್. ಅಶೋಕ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಡಿಎಸ್ ಸುರೇಶ್ (ಮಾಳೆಕಟ್ಟೆ) ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಸವರಾಜು ( ದಿನೇಶ್) ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಕೊನೆಯದಾಗಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಡಿಎಸ್ ಸುರೇಶ್( ಮಾಳೆಕಟ್ಟೆ) ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ವಿಜಯೇಂದ್ರ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಿಎಸ್ ಸುರೇಶ್ ಮಾತನಾಡಿ, ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ನಿರ್ದೇಶಕ ಸಿಎನ್ ಬಾಲಕೃಷ್ಣರವರ ಸಹಕಾರದೊಂದಿಗೆ 1150 ರೈತರಿಗೆ 8.25 ಕೋಟಿ ಬೆಳೆ ಸಾಲ ನೀಡಲಾಗಿದೆ.

ಮುಂಬರುವ ದಿನಗಳಲ್ಲೂ ಅವರ ಸಹಕಾರದೊಂದಿಗೆ ಹೊಸ ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಎಚ್ ಡಿ ಸಿ ಸಿ ಬ್ಯಾಂಕ್ ಮೇಲ್ವಿಚಾರಕ ಎಸ್ ಆರ್ ಮಧು, ಕಲ್ಕೆರೆ ಕೃಷಿಪತ್ತಿನ ಸಹಕಾರ ಸಂಘದ ಮೇಲ್ವಿಚಾರಕ ಶರ್ಮ ಕೆ, ಸಂಘದ ಉಪಾಧ್ಯಕ್ಷ ಕೆಟಿ ಪ್ರಭಾಕರ್, ನಿರ್ದೇಶಕರಾದ ಸುಧಾ ಜಿಬಿ ಹರೀಶ್, ದೇವರಾಜ್, ಪುಷ್ಪ ಪಿಕೆ ರಮೇಶ್, ಹೋಟೆಲ್ ಮಂಜು, ಧನಂಜಯ( ಶಶಿ), ಶಾರದಮ್ಮ ಮಂಜೇಗೌಡ, ಮರಿಗೌಡ, ರಾಜಮ್ಮ ಕಾಳಯ್ಯ, ಮುಖಂಡರಾದ ದೇವಿಗೆರೆ ಈ ಶಿವಣ್ಣ, ಲಾಯರ್ ಬಸವರಾಜ್, ಕೆಎಸ್ ಬೈರೇಗೌಡ, ಆರೋಗ್ಯ ರಕ್ಷಣಾ ಸಮಿತಿ ನಿರ್ದೇಶಕ ಕಲ್ಕೆರೆ ಮೋಹನ್, ನಾಗೇಗೌಡ , ಕೆ ಚೌಡೇನಹಳ್ಳಿ ರಮೇಶ್, ಧರ್ಮರಾಜ್, ರಮೇಶ್, ಗಂಗಾಧರ್, ಸುರೇಶ್, ಜಂಬೂರು ರಮೇಶ್, ಸಂಘದ ಲೆಕ್ಕ ಪರಿಶೋಧಕಿ ಶಕುಂತಲಾ, ಸಿಬ್ಬಂದಿ ಜಗದೀಶ್ ಗೌಡ, ನಟೇಶ್, ಹಾಜರಿದ್ದರು.

JDS-backed Devigere D.S. Suresh won the election held on Wednesday for the post of president of Kalkere Primary Agricultural Cooperative Society in Nuggehalli hobli.