ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಇವರ ವತಿಯಿಂದ ರೋಟರಿ ವಿಷನ್ ಚನ್ನರಾಯಪಟ್ಟಣ ಹಾಗೂ ಫೆಡರಲ್ ಬ್ಯಾಂಕ್ ಇವರ ಸಹಭಾಗಿತ್ವದೊಂದಿಗೆ ಸ್ವತಂತ್ರ ದಿನಾಚರಣೆಯ ಆಚರಿಸಲಾಯಿತು.
೭೯ನೇ ಸ್ವತಂತ್ರ ದಿನಾಚರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ಜ್ಯೋತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಭರತ್ ಕುಮಾರ್ ಹೆಚ್. ಜಿ ಚೇರ್ಮನ್, ಫೆಡರಲ್ ಬ್ಯಾಂಕ್ ವ್ಯವಸ್ಥಾಪಕರು ವಿಜಯ ಉದ್ಘಾಟಿಸಿದರು.
ಸುಮಾರು ೧೮೭ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು, ೩೦ ಜನ ಸಾರ್ವಜನಿಕರು ರಕ್ತದಾನ ಮಾಡಿದರು.










