ಆಲೂರು: ಕದಾಳು ಗ್ರಾಮದಲ್ಲಿ ನಿವೃತ್ತ ಇಂಜಿನಿಯರ್‌ನಿಂದ ರೈತನಿಗೆ ತೊಂದರೆ ಆರೋಪ

In Kadal village of Alur taluk, a farmer named Manjegowda lamented that a retired engineer named Ramesh Kumar is troubling him on the pretext of encroachment. Speaking at a press conference today, he said that there is 17 guntas of land in survey number 67/4

ಹಾಸನ: ಆಲೂರು ತಾಲೂಕು ಕದಾಳು ಗ್ರಾಮದಲ್ಲಿ ನಿವೃತ್ತ ಇಂಜಿನಿಯರ್ ರಮೇಶ್ ಕುಮಾರ್ ಎಂಬುವರು ಒತ್ತುವರಿ ನೆಪದಲ್ಲಿ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಗ್ರಾಮದ ರೈತ ಮಂಜೇಗೌಡ ಅಳಲು ತೋಡಿಕೊಂಡರು. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ವೆ ನಂಬರ್ 67/4 ರಲ್ಲಿ 17 ಗುಂಟೆ ಜಮೀನಿದೆ.

ಇಲ್ಲಿ ಜಮೀನು ಒತ್ತುವರಿ ನಡೆದಿದೆ. ಇದರ ತೆರವಿಗೆ ತಹಸೀಲ್ದಾರ್ ಆದೇಶವಿದೆ ಎಂದು ಹೇಳಿಕೆ ನನ್ನ ಜಮೀನಲ್ಲಿದ್ದ ಕಲ್ಲುಕಂಬ, ತೇಗದ ಮರ ಹಾಳು ಮಾಡಲಾಗಿದೆ ಎಂದು ಆರೋಪಿಸಿದರು. ಒತ್ತುವರಿ ಮಾಡಿರುವುದು, ತಹಸೀಲ್ದಾರ್ ಆದೇಶ ಮಾಡಿರುವ ಆದೇಶ ಕೊಡಿ ಎಂದ್ರೆ ಯಾರೂ ಕೊಡುತ್ತಿಲ್ಲ.

ತಾಲೂಕು ಕಚೇರಿಯವರೂ ಅಲೆದಾಡಿಸುತ್ತಿದ್ದಾರೆ. ಯಾರಿಂದಲೂ ನನಗೆ ನ್ಯಾಯ ಸಿಗುತ್ತಿಲ್ಲ. ಜೊತೆಗೆ ಸ್ಪಂದನೆಯೂ ಸಿಗುತ್ತಿಲ್ಲ. ಪೊಲೀಸರು, ಅರಣ್ಯ ಇಲಾಖೆಯವರಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ನನಗೆ ಆಗಿರುವ ಅನ್ಯಾಯ ಸರಿಪಡಿಸಿ, ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.