15.2 C
Munich
Home News ನೇಪಾಳ ಪ್ರಧಾನಿ ಹುದ್ದೆಗೆ ಕೆಪಿ ಓಲಿ ರಾಜೀನಾಮೆ  ಯುವಜನರ ಪ್ರತಿಭಟನೆಗೆ ಬೆದರಿದ ಜನನಾಯಕ

ನೇಪಾಳ ಪ್ರಧಾನಿ ಹುದ್ದೆಗೆ ಕೆಪಿ ಓಲಿ ರಾಜೀನಾಮೆ  ಯುವಜನರ ಪ್ರತಿಭಟನೆಗೆ ಬೆದರಿದ ಜನನಾಯಕ

ಕಠ್ಮಂಡು: ಮಹತ್ವದ ಬೆಳವಣಿಗೆಯೊಂದರಲ್ಲಿ ನೇಪಾಳದ ಪ್ರಧಾನಿ ಹುದ್ದೆಗೆ ಕೆ.ಪಿ. ಓಲಿ ರಾಜೀನಾಮೆ ಸಲ್ಲಿಸಿದ್ದಾರೆ. ಇಡೀ ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಹಿಷ್ಕರಿಸಿದ್ದಕ್ಕಾಗಿ ಯುವಜನತೆ ಇತ್ತೀಚೆಗೆ ಪ್ರತಿಭಟನೆಗೆ ಇಳಿದಿತ್ತು.

ಮೊದಲಿಗೆ ಶಾಂತಿಯುತವಾಗಿ ನಡೆದ ಪ್ರತಿಭಟನೆ ಆನಂತರದಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಸೆ. 9ರಂದು ಪ್ರತಿಭಟನಾಕಾರರು ಪ್ರಧಾನಿಯವರ ನಿವಾಸಕ್ಕೆ ನುಗ್ಗಿ ಇಡೀ ಮನೆಗೆ ಬೆಂಕಿ ಹಚ್ಚಿದ್ದರು. ಮತ್ತೊಂದೆಡೆ, ನೇಪಾಳದ ಅಧ್ಯಕ್ಷರಾದ ರಾಮಚಂದ್ರ ಪೌಡೆಲ್ ಅವರ ನಿವಾಸಕ್ಕೂ ನುಗ್ಗಿ ದಾಂಧಲೆ ನಡೆಸಿದ್ದರು.

ಪೀಠೋಪಕರಣಗಳನ್ನೆಲ್ಲಾ ಧ್ವಂಸ ಮಾಡಿದ್ದರು.ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಕೆಪಿ ಓಲಿಯವವರು ದೇಶ ತೊರೆಯುವ ಚಿಂತನೆ ನಡೆಸಿದ್ದರು. ಕೂಡಲೇ ದುಬೈಗೆ ಹೋಗುವ ಸಿದ್ಧತೆಗಳನ್ನು ನಡೆಸಿದ್ದರು. ಆದರೆ, ಮಧ್ಯಾಹ್ನದ ಹೊತ್ತಿಗೆ ರಾಜಕೀಯ ಚಿತ್ರಣ ಬದಲಾಯಿತು. ಓಲಿಯವರು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸೆ. 9ರ ಸಂಜೆ ಹೊತ್ತಿಗೆ ಅವರ ಪಕ್ಷವಾದ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳದ (ಯು.ಎಂ.ಎಲ್) ಸಂಸದೀಯ ಪಕ್ಷದ ಸಭೆ ನಡೆಯಲಿದ್ದು, ಅದರಲ್ಲಿ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

error: Content is protected !!