6.5 C
Munich
Home News ಹೊಳೆನರಸೀಪುರ:ಹೊಳೆನರಸೀಪುರದಲ್ಲಿ ರಥಕ್ಕೆ ಬಟ್ಟೆ ಹಾಕೋ ವಿಚಾರದಲ್ಲಿ ರಾಜಕೀಯ – ರೇವಣ್ಣ ಆಕ್ರೋಶಕ್ಕೆ ಕಾರಣವೇನು? ಏನಿದು ವಿವಾದ?

ಹೊಳೆನರಸೀಪುರ:ಹೊಳೆನರಸೀಪುರದಲ್ಲಿ ರಥಕ್ಕೆ ಬಟ್ಟೆ ಹಾಕೋ ವಿಚಾರದಲ್ಲಿ ರಾಜಕೀಯ – ರೇವಣ್ಣ ಆಕ್ರೋಶಕ್ಕೆ ಕಾರಣವೇನು? ಏನಿದು ವಿವಾದ?

Politics Over Covering the Temple Chariot in Holenarasipura – Why Is Revanna Angry? What Is the Controversy?

ಹೊಳೆನರಸೀಪುರ,ಮಾರ್ಚ್,2,2026(www.kannadapost.com):-ಪಟ್ಟಣದಲ್ಲಿ ಇಂದು ಮಂಗಳವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವದ ಮುನ್ನ ರಥ ಅಲಂಕಾರ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ರಥಕ್ಕೆ ಬಟ್ಟೆ ಅಲಂಕಾರ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಟ್ಟೆ ಕಟ್ಟಿದ್ದನ್ನು ಜೆಡಿಎಸ್ ಕಾರ್ಯಕರ್ತರು ವಿರೋಧಿಸಿದರು. ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಆಕ್ಷೇಪದ ಬಳಿಕ ಬಟ್ಟೆ ತೆರವುಗೊಳಿಸಲು ಮುಂದಾದಾಗ ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಕಂಡು ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಶೀಲ್ದಾರ್ ರೇಣುಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಇತರೆ ಅಧಿಕಾರಿಗಳ ಕಾರ್ಯವೈಖರಿಯನ್ನು ರೇವಣ್ಣ ಖಂಡಿಸಿ, ಯಾವುದೇ ಅನಾಹುತ ಸಂಭವಿಸಿದರೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದರು. ಹೂವಿನ ಅಲಂಕಾರ ವ್ಯವಸ್ಥೆಯನ್ನು ಬದಲಾಯಿಸಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಸಂಬಂಧಿಸಿದಂತೆ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಹಿನ್ನೆಲೆ ಮಾ.೨ ಬೆಳಗ್ಗೆ ೬ ಗಂಟೆಯಿಂದ ಮಾ.೩ರ ಮಧ್ಯರಾತ್ರಿ ವರೆಗೆ ಪುರಸಭೆಯ ೧೦ ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಾಟ ಮತ್ತು ಸರಬರಾಜನ್ನು ಜಿಲ್ಲಾಡಳಿತ ನಿಷೇಧಿಸಿದೆ. ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಅವರ ಪ್ರಸ್ತಾವನೆ ಆಧರಿಸಿ ಈ ಆದೇಶ ಹೊರಡಿಸಲಾಗಿದೆ.

ಮಾ.೩ ರಂದು ನಡೆಯಲಿರುವ ಜಾತ್ರೆಯಲ್ಲಿ ಶಾಸಕ ಎಚ್.ಡಿ. ರೇವಣ್ಣ ಹಾಗೂ ಸಂಸದ ಶ್ರೇಯಸ್ ಎಂ. ಪಟೇಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದ್ದು, ಜಾತ್ರೆ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಭದ್ರತಾ ಕ್ರಮ ಕೈಗೊಂಡಿದೆ.

error: Content is protected !!